ಏಳು ವರ್ಷಗಳಿಂದ ಬಿಲ್ ಪಾವತಿ ಮಾಡದ ಹಿನ್ನೆಲೆ: ಮೈಸೂರು ಜಿಲ್ಲಾಧಿಕಾರಿ ಕಚೇರಿ ಜಪ್ತಿ…

Promotion

ಮೈಸೂರು,ಜ,27,2020(www.justkannada.in): ಕಳೆದ 7 ವರ್ಷಗಳಿಂದ ಬಿಲ್ ಪಾವತಿ ಮಾಡದ ಹಿನ್ನೆಲೆ ಕೋರ್ಟ್ ಆದೇಶದಂತೆ  ಮೈಸೂರು ಜಿಲ್ಲಾಧಿಕಾರಿ ಕಚೇರಿಯನ್ನ ಕಂಟ್ರಾಕ್ಟರ್ ಜಪ್ತಿ ಮಾಡಿದ್ದಾರೆ.

ಕಂಟ್ರಾಕ್ಟರ್ ಚಿದಂಬರ ಎಂಬುವವರು 2013ರಲ್ಲಿ ಅಟಲ್ ಜಿ. ಜನಸ್ನೇಹಿ ಯೋಜನೆಯಡಿ ಡಿಸಿ ಕಚೇರಿಗೆ  ಯುಪಿಎಸ್ ಸಪ್ಲೇ ಮಾಡಿದ್ದರು. ಆದರೇ ಯುಪಿಎಸ್ ಸಪ್ಲೇ ಮಾಡಿ 7 ವರ್ಷವಾದ್ರೂ ಮೈಸೂರು ಜಿಲ್ಲಾಡಳಿತ ಬಿಲ್ ಪಾವತಿಸಿರಲಿಲ್ಲ. ಈ ಕುರಿತು ಕಂಟ್ರಾಕ್ಟರ್ ಚಿದಂಬರ ಕೋರ್ಟ್ ಮೊರೆಹೊಗಿದ್ದರು.

ಈ ಸಂಬಂಧ ಬಿಲ್ ಪಾವತಿಸುವಂತೆ ಜಿಲ್ಲಾಡಳಿತಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಆದರೆ ಜಿಲ್ಲಾಡಳಿತ ಕೋರ್ಟ್ ಆದೇಶ ನಿರ್ಲಕ್ಷಿಸಿ ಬಿಲ್ ಪಾವತಿ ಮಾಡಿರಲಿಲ್ಲ. ಕೋರ್ಟ್ ಆದೇಶ ಉಲ್ಲಂಘನೆ ಹಿನ್ನೆಲೆ ಡಿಸಿ ಕಚೇರಿ ಜಪ್ತಿಗೆ ಕೋರ್ಟ್ ಸೂಚಿಸಿತ್ತು. ಕೋರ್ಟ್ ಆದೇಶದಂತೆ ಕಂಟ್ರಾಕ್ಟರ್ ಚಿದಂಬರ ಅವರು  ಜಿಲ್ಲಾಧಿಕಾರಿಗಳ ಕಚೇರಿ ಜಪ್ತಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಕಂಪ್ಯೂಟರ್, ಕುರ್ಚಿ, ಸೋಫಾ, ಕಂಪ್ಯೂಟರ್ ಗಳನ್ನು ಜಪ್ತಿಮಾಡಿದ್ದಾರೆ.

Key words: bill -not paying   -Mysore-DC Office- Contractor