Sunday, September 20, 2026

BDA Apartments

ಸಿದ್ಧರಾಮಯ್ಯ ಮತ್ತೆ ಲಾಯರ್ ಗಿರಿ ಮಾಡಲು ಹೊರಟಿದ್ದಾರೆ. ಸದ್ಯದಲ್ಲೇ ಅವರಿಗೆ ...
Home Front Page ಸಿದ್ಧರಾಮಯ್ಯ ಮತ್ತೆ ಲಾಯರ್ ಗಿರಿ ಮಾಡಲು ಹೊರಟಿದ್ದಾರೆ. ಸದ್ಯದಲ್ಲೇ ಅವರಿಗೆ ಕಾಂಗ್ರೆಸ್ ನಿಂದ ಗೇಟ್ ಪಾಸ್-...

ಸಿದ್ಧರಾಮಯ್ಯ ಮತ್ತೆ ಲಾಯರ್ ಗಿರಿ ಮಾಡಲು ಹೊರಟಿದ್ದಾರೆ. ಸದ್ಯದಲ್ಲೇ ಅವರಿಗೆ ಕಾಂಗ್ರೆಸ್ ನಿಂದ ಗೇಟ್ ಪಾಸ್- ಸಚಿವ ಆರ್ . ಅಶೋಕ್ ಟಾಂಗ್…

ಬೆಂಗಳೂರು,ಜ,27,2020(www.justkannada.in): ಪಕ್ಷಾಂತರಿಗಳು ಅತಂತ್ರರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್,  ಅತಂತ್ರರಾಗಿರೋಧು ಸಿದ್ಧರಾಮಯ್ಯ . ಸಿದ್ದು ಮತ್ತೆ ಲಾಯರ್ ಗಿರಿ ಮಾಡಲು ಹೊರಟಿದ್ದಾರೆ.  ಸದ್ಯದಲ್ಲೇ ಸಿದ್ಧುಗೆ ಕಾಂಗ್ರೆಸ್ ನಿಂದ ಗೇಟ್ ಪಾಸ್ ಸಿಗುತ್ತೆ ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ಸಿದ್ಧರಾಮಯ್ಯ ಮೊದಲು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿ. ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದ ನಳಿನಿ ಬೆಂಬಲಿಸುತ್ತಾರೆ. ಇದನ್ನ ನೋಡಿದರೇ ಪಿಎಫ್ ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರ ಪರ ವಕಲತ್ತು ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎನ್ನಿಸುತ್ತಿದೆ. ಆರ್ ಎಸ್ ಎಸ್ ಬಗ್ಗೆ ಮಾತನಾಡಲು ಕಾಂಗ್ರೆಸ್ ಗೆ ನೈತಿಕತೆ ಇಲ್ಲ. ಅವರು ಸಂವಿದಾನ ಉಳಿಸಿ ಎಂದು ಕರೆ ನೀಡುವ ಬದಲು ಕಾಂಗ್ರೆಸ್ ಉಳಿಸಿ ಎಂದು ಕರೆ ನೀಡಿದರೇ ಉತ್ತಮ ಎಂದು ಕಾಲೆಳೆದರು.

ಸಿದ್ಧರಾಮಯ್ಯ ಹುಲಿಯಾ ಆದರೇ ಸಿಎಂ ಬಿಎಸ್ ವೈ ರಾಜಾಹುಲಿ. ಹೌದು ಹುಲಿಯಾಗಿಂತ ರಾಜಾ ಹುಲಿ ದೊಡ್ಡದು,ರಾಜಾ ಹುಲಿಗೆ ಸರ್ಕಾರ ಹೇಗೆ ನಡೆಸಬೇಕು ಅಂತ ಗೊತ್ತಿದೆ,ಸಿದ್ದರಾಮಯ್ಯ ಅದನ್ನು ಯಡಿಯೂರಪ್ಪಗೆ ಹೇಳಿಕೊಡುವ ಅಗತ್ಯ ಇಲ್ಲ ಎಂದು ಸಚಿವ ಆರ್ ಅಶೋಕ್  ತಿಳಿಸಿದರು.

ಹಾಗೆಯೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಆರ್.ಅಶೋಕ್ , ನಾನೂ ಕೂಡಾ ಹಲವರನ್ನು ಬಿಜೆಪಿಗೆ ಕರೆದುಕೊಂಡು ಬಂದಿದ್ದೇನೆ. ಅವರೆಲ್ಲ ಸಚಿವ ಸಂಪುಟ ವಿಸ್ತರಣೆ ಯಾವಾಗ ಅಂತ ನನಗೂ ಕೇಳುತ್ತಿದ್ದಾರೆ.ಇದನ್ನು ನಾನು ಸಿಎಂ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

Key words:  Bangalore-minister-R.Ashok- former cm -siddaramaiah