ಬಿಗ್ ಬಾಸ್ ಕನ್ನಡ: ಇಲ್ಲಿದೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿರುವವರ ಲಿಸ್ಟ್ !

Promotion

ಬೆಂಗಳೂರು, ಅಕ್ಟೋಬರ್ 06, 2023 (www.justkannada.in): ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಓಪನಿಂಗ್‌’ಗೆ ತಯಾರಿ ನಡೆಯುತ್ತಿದ್ದು, ಯಾರು ಯಾರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ.

ನವರಸ ನಾಯಕ ಜಗ್ಗೇಶ್ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೀಗ ಆ ಕುರಿತು ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

‘ನಾನು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ವಿಷಯ. ನನ್ನ ಅಭಿಮಾನಿಗಳ ಮಾಹಿತಿಗಾಗಿ’ ಎಂದು ಜಗ್ಗೇಶ್ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ.

ನಟ ಸುನೀಲ್ ರಾವ್, ಭವ್ಯಾ ಗೌಡ, ರಘು ಮುಖರ್ಜಿ, ಸಮಾಜ ಸೇವಕಿ ಅಕ್ಕ ಅನು, ಪ್ರಕಾಶ್ ತುಮ್ಮಿನಾಡು, ರಂಜನಿ ರಾಘವನ್, ಹುಲಿ ಕಾರ್ತಿಕ್, ನಮ್ರತಾ ಗೌಡ, ಚಂದ್ರಪ್ರಭ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ, ‘ಕೆಜಿಎಫ್’ ನಟಿ ರೂಪಾ ರಾಯಪ್ಪ, ಮಿಮಿಕ್ರಿ ಗೋಪಿ ಸೇರಿದಂತೆ ಹಲವರ ಹೆಸರುಗಳು ಬಿಗ್ ಬಾಸ್ ಮನೆಗೆ ಬರುವವರ ಪಟ್ಟಿಯಲ್ಲಿವೆ.