ಲೋಕಸಭೆ ಭಾಷಣದ ಬಳಿಕ ಬಿಗ್ ಬಿ ನಿವಾಸಕ್ಕೆ ಭಾರಿ ಭದ್ರತೆ

Promotion

ಬೆಂಗಳೂರು, ಸೆಪ್ಟೆಂಬರ್ 17, 2020 (www.justkannada.in): ಜಯಾ ಭಾಷಣದ ಬೆನ್ನಲ್ಲೇ ‘ಬಿಗ್ ಬಿ’ ನಿವಾಸಕ್ಕೆ ಭಾರೀ ಭದ್ರತೆ ಒದಗಿಸಲಾಗಿದೆ.

ಲೋಕಸಭೆಯ ಅಧಿವೇಶನದ ವೇಳೆ ಪರೋಕ್ಷವಾಗಿ ಕಂಗನಾ ರಣಾವತ್ ಹಾಗೂ ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಕಿಡಿಕಾರಿದ್ದರು.

ಚಿತ್ರರಂಗದಿಂದ ಲಾಭ ಪಡೆದವರು ಈಗ ಅದರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಜಯಾ ಬಚ್ಚನ್ ಈ ಭಾಷಣ ಈಗ ಪರ – ವಿರೋಧದ ಚರ್ಚೆಗೆ ಕಾರಣವಾಗಿದ್ದು, ಸುಶಾಂತ್ ಸಿಂಗ್ ಸಾವನ್ನಪ್ಪಿದ ವೇಳೆ ನೀವು ಮೌನ ವಹಿಸಿದ್ದು ಏಕೆ ಎಂದು ಕೆಲವರು ಜಯಾ ಬಚ್ಚನ್ ಅವರನ್ನು ಪ್ರಶ್ನಿಸುತ್ತಿದ್ದಾರೆ.