ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್: ತನಿಖೆಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್.

Promotion

ಬೆಂಗಳೂರು,ಫೆಬ್ರವರಿ,10,2023(www.justkannada.in): ಆದಾಯ ಮೀರಿ ಆಸ್ತಿ ಗಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಡಿ.ಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಫೆಬ್ರವರಿ 24ರವರೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶಿಸಿದೆ.  ತಮ್ಮ ವಿರುದ್ಧದ ಪ್ರಕರಣಗಳ ತನಿಖೆಗೆ ತಡೆ ಕೋರಿ ಡಿಕೆ ಶಿವಕುಮರ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಮಧ್ಯಂತರ ತಡೆ ನೀಡಿ ಫೆಬ್ರವರಿ 24ರವರೆಗೂ ತನಿಖೆ  ನಡೆಸದಂತೆ ಆದೇಶಿಸಿದೆ. ಹಾಗೆಯೇ ಫೆ.24ರೊಳಗೆ ತನಿಖಾ ಪ್ರಗತಿ ವರದಿ ಸಲ್ಲಿಸಬೇಕೆಂದು ಸಿಬಿಐಗೆ ಸೂಚನೆ ನೀಡಿದೆ.

Key words: Big relief – DK Shivakumar-High Court – interim stay – investigation