ನಿಂಬೆ ಹಣ್ಣು ವರ್ಕೌಟ್ ಆಗಲ್ಲ ಎಂದ ಡಿ.ಕೆ ಸುರೇಶ್ ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಟಾಂಗ್.

ಹಾಸನ,ಫೆಬ್ರವರಿ,10,2023(www.justkannada.in): ಈ ಚುನಾವಣೆಯಲ್ಲಿ ನಿಂಬೆಹಣ್ಣು ವರ್ಕೌಟ್ ಆಗಲ್ಲ ಎಂದು ಟಾಂಗ್ ನೀಡಿದ್ಧ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಕೌಂಟರ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್.ಡಿ ರೇವಣ್ಣ, ನನ್ನತ್ರ ನಿಂಬೆಹಣ್ಣಿಲ್ಲ ದೇವರಿದ್ದಾನೆ.   ನಮಗೆ ಹೊಳೆನರಸೀಪುರದ ಲಕ್ಷ್ಮಿನರಸಿಂಹ , ಈಶ್ವರ ಆಶೀರ್ವಾದವಿದೆ. ಇವೆರಡು ಕಣ್ಣು ಬಿಟ್ಟರೇ ಎಲ್ಲವನ್ನೂ ಭಸ್ಮ ಮಾಡುತ್ತೆ. ಇವೆರೆಡು ದೇವರು ಇರುವವರೆಗೂ ನಮ್ಮನ್ನ ಯಾರು ಏನು ಮಾಡಲು ಆಗಲ್ಲ ಎಂದು ತಿರುಗೇಟು ನೀಡಿದರು.

ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ಪಕ್ಷದವರು ದೊಡ್ಡವರಿದ್ದಾರೆ, ಅವರದ್ದು ಅರವತ್ತು ವರ್ಷದ ಓಲ್ಡ್ ಬಸ್. ಅವರಿಗೆ ಭಗವಂತ ಒಳ್ಳೆಯದು ಮಾಡಲಿ. ಆ ಓಲ್ಡ್ ಬಸ್ ಎಲ್ಲೆಲ್ಲೋ ನಿಂತುಕೊಳ್ಳುವುದು ಬೇಡ. 60 ವರ್ಷದ ಹಳೇ ಬಸ್ ಬಿಟ್ಟು ಹೊಸ ಬಸ್ ತೆಗೆದುಕೊಳ್ಳಲಿ. ಯಾರು ಯಾರು ಬೇಕು ಅವರನ್ನು ಕಾಂಗ್ರೆಸ್‌ ಗೆ ಹತ್ತಿಸಿಕೊಂಡು ಓಡಾಡಲಿ ಎಂದು  ಹೆಚ್.ಡಿ ರೇವಣ್ಣ ವ್ಯಂಗ್ಯವಾಡಿದರು.

Key words: Former minister-HD Revanna- – DK Suresh – lemons – not – workout.