ಸಾವರ್ಕರ್‌ಗೆ ಭಾರತ ರತ್ನ, ವಿರೋಧ ಸರಿಯಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

Promotion

ಬಾಗಲಕೋಟೆ, ಅಕ್ಟೋಬರ್ 20, 2019 (www.justkannada.in): ವಿವಾದಾಸ್ಪದ ಕೆಲಸಗಳನ್ನು ಮಾಡಿದ ಟಿಪ್ಪು ಸುಲ್ತಾನ್‌ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೌರವ ಕೊಡ್ತಾರೆ, ವೀರ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಡೋದಕ್ಕೆ ವಿರೊಧಿಸುತ್ತಾರೆ. ಅದು ಸರಿಯಲ್ಲ‘ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ವೀರ ಸಾರ್ವಕರ್ ಅಪರಾಧಿ ಎಂದು ಅಂದಿನ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಎಲ್ಲಿಯೂ ಹೇಳಿಲ್ಲ. ಹಾಗಿದ್ದರೆ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಬೇಕಿತ್ತು‘ ಎಂದು ಹೇಳಿದ್ದಾರೆ.