ಯಾವುದೇ ಕಾರಣಕ್ಕೂ ಭಾರತ್ ಜೋಡೋ ಯಾತ್ರೆ ಸ್ಥಗಿತ ಇಲ್ಲ: ಕೇಂದ್ರ ಆರೋಗ್ಯ ಸಚಿವರ ಮನವಿ ತಿರಸ್ಕರಿಸಿದ ಕಾಂಗ್ರೆಸ್.

Promotion

ಜೈಪುರ,ಡಿಸೆಂಬರ್,21,2022(www.justkannada.in): ನೆರೆಯ ದೇಶ ಚೀನಾದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶದಲ್ಲೂ ಕೊರೋನಾ ಆತಂಕ ಮನೆ ಮಾಡಿದ್ದು ಹೀಗಾಗಿ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ ಇಲ್ಲ ಮುಂದೂಡಿ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಾಡಿದ್ದ ಮನವಿಯನ್ನ ಕಾಂಗ್ರೆಸ್ ತಿರಸ್ಕರಿಸಿದೆ.

ಈ ಕುರಿತು ಮಾತನಾಡಿರುವ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ಯಾವುದೇ ಕಾರಣಕ್ಕೂ ಭಾರತ್ ಜೋಡೋ ಯಾತ್ರೆ ಸ್ಥಗಿತಗೊಳಿಸುವುದಿಲ್ಲ. ಭಾರತ್  ಜೋಡೋ ಯಾತ್ರೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಕೊರೋನಾ ಆತಂಕ ಹಿನ್ನೆಲೆ ದೇಶದ ಹಿತದೃಷ್ಠಿಯಿಂದ ಭಾರತ್ ಜೋಡೋ ಯಾತ್ರೆ ನಿಲ್ಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮನವಿ ಮಾಡಿದ್ದರು.

Key words: Bharat Jodo Yatra- Congress -rejected -Union Health -Minister’s- request.