ಮೈಸೂರಿನಲ್ಲಿ ಯುವಭಾರತ್ ಸಂಘಟನೆಯಿಂದ ಭಗತ್ ಸಿಂಗ್ ಜನ್ಮದಿನಾಚರಣೆ

ಬೆಂಗಳೂರು, ಸೆಪ್ಟೆಂಬರ್ 28, 2020 (www.justkannada.in): ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಕಾರ್ಯಕ್ರಮ ವನ್ನು ಯುವ ಭಾರತ್ ಸಂಘಟನೆ ವತಿಯಿಂದ ನಗರದ ರಾಜಕುಮಾರ್ ರಸ್ತೆಯಲ್ಲಿ ಇರುವ ತ್ರಿವೇಣಿ ವೃತ್ತದಲ್ಲಿ ಆಯೋಜಿಸಲಾಗಿತ್ತು.

ನಗರದ ಯುವಭಾರತ್ ಸಂಘಟನೆ ವತಿಯಿಂದ ತೃವೇಣಿ ವೃತ್ತದಲ್ಲಿ ಕ್ರಾಂತಿ ಕಾರಿ ಭಗತ್ ಸಿಂಗ್ ರವರ ೧೧೩ ನೇ ಜನ್ಮ ದಿನಾಚರಣೆ ಯನ್ನು ಅವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕ ರಿಗೆ ಸಿಹಿ ವಿತರಿಸುವ ಮೂಲಕ ಆಚರಿಸಲಾಯಿತು.

ನಂತರ ಭಾ.ಜ‌.ಪ.ನಗರ ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು ಮಾತನಾಡಿ, ಇಂದಿನ ಯುವ ಪೀಳಿಗೆ ಕ್ರಾಂತಿ ಕಿಡಿಯಾದ ಭಗತ್ ಸಿಂಗ್ ಮಾರ್ಗದರ್ಶನದಂತೆ ನಡೆಯಬೇಕು. ಅವರ ದೇಶಪ್ರೇಮ ನಮಗೆ ಮಾದರಿ,ಇಂತಹ ಮಹಾನ್ ದೇಶಪ್ರೇಮಿಗಳು ಹುಟ್ಟು ವುದೆ ಭಾರತಾಂಭೆಯ ಮಡಿಲಲ್ಲಿ. ಇಂತಹ ಮಹಾನ್ ಪುರುಷರ ಆಸೆ ಯಂತೆ ನಮ್ಮೇಲ್ಲರಿಗೂ ಇಂದು ಸ್ವಾತಂತ್ರ್ಯ ಸಿಕ್ಕಿದೆ ಎಂದರು.

ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎನ್ನುವ ಮೂಲಕ ಬ್ರಿಟಿಷರ ವಿರುದ್ಧ “”ಇಂಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಯನ್ನು ಹಾಕಿ ಧಿಕ್ಕರಿಸಿದ ಮಹಾತ್ಮ ಇಂತ ಪುರುಷರ ಚರಿತ್ರೆಯನ್ನು ನಮ್ಮ ಈಗಿನ ಪೀಳಿಗೆಯ ಯುವಕರು ಗಳಿಗೆ ಮತ್ತು ಪಠ್ಯ ಪುಸ್ತಕಗಳಲ್ಲಿ ಮುದ್ರಿಸುವ ಮುಖೇನಾ ಹಾಗೂ ನಗರದ ಯಾವುದಾದರೊಂದು ವೃತ್ತದಲ್ಲಿ ಇವರ ಹೆಸರು ನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಯಿತು.

ನಗರ ಯುವ ಭಾರತ್ ಸಂಘಟನೆಯ ಸಂಚಾಲಕ ಆನಂದ್ ಮಾತನಾಡಿದರು. ಸಮಾಜ ಸೇವಕರಾದ Bjp Obc ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ತ್ರಿವೇಣಿ, ಆಟೋಚಾಲಕರು ಗೋವಿಂದ ನಾಸಿರ್.ಸ್ವಾಮಿ, ಸವಿತ ಸಮಾಜ ನರಸಿಂಹ ರಾಜವಿಧಾನಸಬಾ ಕ್ಷೇತ್ರದ ಅಧ್ಯಕ್ಷ ಬಾಲು ಇತರರು ಭಾಗವಹಿಸಿದ್ದರು.