ಬೆಂಗಳೂರಿನ ಸರ್ಕಾರಿ ಶಾಲೆ 75 ಉಪಗ್ರಹಗಳನ್ನು ಅಭಿವೃದ್ಧಿ ಪಡಿಸಲಿದೆಯಂತೆ…!

kannada t-shirts

ಬೆಂಗಳೂರು, ಜುಲೈ 10, 2021 (www.justkannada.in): “ಎಲ್ಲವೂ ಯೋಜಿಸಿದಂತೆ ನಡೆದರೆ ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆಯು ಅತ್ಯಂತ ವಿಶೇಷ ಕಾರ್ಯವನ್ನು ಸಾಧಿಸಲಿದೆ. ಈ ಶಾಲೆ ಉಪಗ್ರಹವನ್ನು ಅಭಿವೃದ್ಧಿಪಡಿಸಿರುವ ದೇಶದ ಮೊಟ್ಟ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ,” ಎನ್ನುತ್ತಾರೆ ಕರ್ನಾಟಕದ ಉಪಮುಖ್ಯಮಂತ್ರಿಗಳಾದ ಸಿ.ಎನ್. ಅಶ್ವತ್ಥನಾರಾಯಣ.jk

ಈ ಕುರಿತು ಮಾತನಾಡಿರುವ ಅಶ್ವತ್ಥನಾರಾಯಣ ಅವರು, 75 ಉಡಾಯಿಸಲು ಸಿದ್ಧವಾಗಿರುವಂತಹ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲು ಹತ್ತಿರದ ಶಾಲೆಗಳ ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದಿದ್ದಾರೆ.

“ಸಾಮಾನ್ಯವಾಗಿ ಇಂತಹ ಯೋಜನೆಗಳಲ್ಲಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳನ್ನೇ ಬಳಸಿಕೊಳ್ಳಲಾಗುತ್ತದೆ. ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಸಂಘ ಹಾಗೂ ಇಸ್ರೊದ ನೆರವಿನೊಂದಿಗೆ ಉಪಗ್ರಹಗಳ ವಿನ್ಯಾಸ ಹಾಗೂ ಅಭಿವೃದ್ಧಿಯನ್ನು ಈ ಶಾಲೆಯಲ್ಲಿ ಇತರೆ ಶಾಲೆಯ ಕೆಲವು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕೈಗೊಳ್ಳಲಾಗುವುದು,”ಎಂದು ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಕಾರ್ಯಕ್ರಮ ಮುಂದಿನ ವರ್ಷ ಭಾರತದ 75ನೇ ಸ್ವಾತಂತ್ರ್ಯ ಆಚರಣೆಗಳ ಭಾಗವಾಗಿ ಕೈಗೊಳ್ಳಲು ಯೋಜಿಸಲಾಗಿದೆ. ಈ ಕಲ್ಲು ಕಟ್ಟಡದ ಸರ್ಕಾರಿ ಶಾಲೆ ಮಲ್ಲೇಶ್ವರಂನ 18ನೇ ತಿರುವಿನಲ್ಲಿದೆ.

ಈ ಪ್ರದೇಶದ ವಿಧಾನಸಭಾ ಸದಸ್ಯರೂ ಆಗಿರುವ ಅಶ್ವತ್ಥನಾರಾಯಣ್ ಅವರು ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. “ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಸಂಖ್ಯೆ ಕಳೆದ ವರ್ಷದ ೨,೨೨೧ರ ಹೋಲಿಕೆಯಲ್ಲಿ ಈ ಬಾರಿ ೨,೭೪೩ಕ್ಕೆ ಏರಿಕೆಯಾಗಿದೆ. ಗುಣಮಟ್ಟದ ಬೋಧನೆ ಹಾಗೂ ಕಲಿಕೆಯನ್ನು ಸಾಧಿಸುವುದರ ಮೂಲಕ ಇದನ್ನು ಸರಿಹೊಂದಿಸಬೇಕು,” ಎಂದರು.

ಮತ್ತಿಕೆರೆಯ ಮಾಡೆಲ್ ಪ್ರೈಮರಿ ಶಾಲೆಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್,  ಸರ್ಕಾರಿ ಕಾಲೇಜುಗಳು ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕಾಕರಣದ ಅಭಿಯಾನ ೬೫%ರಷ್ಟು ಪೂರ್ಣಗೊಂಡಿದೆ ಎಂದು ಉತ್ತರಿಸಿದರು. “ಲಸಿಕಾಕರಣ ಅಭಿಯಾನದ ಪ್ರಭಾರ ಅಧಿಕಾರಿಗಳು ಲಸಿಕಾಕರಣದ ಗುರಿಯನ್ನು ಸಾಧಿಸಲು ಜಿಲ್ಲಾಧಿಕಾರಿಗಳು ಹಾಗೂ ಇತರೆ ಭಾಗೀದಾರರೊಂದಿಗೆ ಸಂಪರ್ಕದಲ್ಲಿದ್ದು ಸಂಯೋಜಿಸುತ್ತಿದ್ದಾರೆ. ಸಾಧ್ಯವಾದಷ್ಟು ಬೇಗ ಈ ಅಭಿಯಾನ ಪೂರ್ಣಗೊಳ್ಳಲಿದೆ,” ಎಂದು ತಿಳಿಸಿದರು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್

Key words: Bengaluru -government school – develop- 75 satellites-DCM-Ashwath narayan

website developers in mysore