ಮಲಗಿದ್ದ ವೇಳೆ ಹಾಸಿಗೆಗೆ ದೇವರ ದೀಪ ತಗುಲಿ ಅಗ್ನಿ ಆಕಸ್ಮಿಕ: ಬಾಲಕಿ ಸಜೀವದಹನ…

Promotion

ಬೆಳಗಾವಿ,ಜೂ,25,2019(www.justkannada.in):  ಮಲಗಿದ್ದ ವೇಳೆ ಹಾಸಿಗೆಗೆ ದೇವರ ದೀಪ ಬೆಂಕಿ ತಗುಲಿ ಅಗ್ನಿ ಆಕಸ್ಮಿಕ ಸಂಭವಿಸಿ ಬಾಲಕಿ ಸಜೀವ ದಹನವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಆನಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. 8 ವರ್ಷದ ಕಸ್ತೂರಿ ಮೃತಪಟ್ಟ ಬಾಲಕಿ. ಘಟನೆಯಲ್ಲಿ ಮೃತ ಬಾಲಕಿ ಕಸ್ತೂರಿಯ ತಂದೆ ತಾಯಿ ಅಪಾಯದಿಂದ ಪಾರಾಗಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಪೋಷಕರಿಬ್ಬರನ್ನ  ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯಲ್ಲಿ ಮಲಗಿದ್ದ ವೇಳೆ ಹಾಸಿಗೆಗೆ ದೇವರ ದೀಪದ ಬೆಂಕಿ ತಗುಲಿ ಈ ಘಟನೆ ಸಂಭವಿಸಿದ್ದು ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: belagavi-sleeps – bed – fires – lamp-girl- death