ಜಿಲ್ಲಾ ನ್ಯಾಯಾಧೀಶರೊಬ್ಬರ ಸ್ವಯಂ ನಿವೃತ್ತಿಗೆ ಅನುಮತಿ ನೀಡಿದ ಸರ್ಕಾರ…

Promotion

ಬೆಳಗಾವಿ,ಸೆ,25,2019(www.justkannada.in):  ಜಿಲ್ಲಾ ನ್ಯಾಯಾಧೀಶರೊಬ್ಬರ ಸ್ವಯಂ ನಿವೃತ್ತಿಗೆ ಸರ್ಕಾರ ಅನುಮತಿ ನೀಡಿದೆ.

ಬೆಳಗಾವಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ  ಎಂ.ಮಹದೇವಯ್ಯ ಅವರು ಸ್ವಯಂ ನಿವೃತ್ತಿಗಾಗಿ ಮನವಿ ಮಾಡಿದ್ದರು.  ಆಗಸ್ಟ್ 26 ರಂದು ಅವರು ಸರ್ಕಾರಕ್ಕೆ ಸ್ವ ಇಚ್ಚೆಯಿಂದ ಮನವಿ ಮಾಡಿದ್ದರು. ಇದೀಗ ಇಂದು ಎಂ. ಮಹದೇವಯ್ಯ ಅವರಿಗೆ ಸ್ವಯಂ ನಿವೃತ್ತಿಗೆ  ಸರ್ಕಾರ ಅನುಮತಿ ನೀಡಿದೆ.

ನಾಗರೀಕ ನಿಯಮ 285 (2) (ix ) ಅನ್ವಯ ಮಹದೇವಯ್ಯ ಅವರ ಮನವಿ ಅಂಗೀಕರಿಸಿದ ಸರ್ಕಾರ, ನಿಯಮ 281 ( 1 ) (ಎ) ಪ್ರಕಾರ ಸರ್ಕಾರಿ ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸ್ವ ಇಚ್ಛಾ ನಿವೃತ್ತಿಗೆ ಅನುಮತಿ ನೀಡಿದೆ. ಮಹದೇವಯ್ಯ ಸುದೀರ್ಘ 30 ವರ್ಷಗಳ ಸೇವೆಯ ನಂತರ ಸ್ವಯಂ ನಿವೃತ್ತಿ ಹೊಂದಿದ್ದಾರೆ.

ಎಂ. ಮಹದೇವಯ್ಯ ಅವರು ಸಾಕಷ್ಟು ಉತ್ತಮ ತೀರ್ಪುಗಳನ್ನು ನೀಡಿದ್ದರು. ಜತೆಗೆ ಯುವ ವಕೀಲರು ಹಾಗೂ ಯುವ ನ್ಯಾಯಾಧೀಶರಿಗೆ ಸ್ಪೂರ್ತಿಯಾಗಿದ್ದ ಮಹದೇವಯ್ಯ ಮಾನವೀಯ ಮೌಲ್ಯಗಳಿಂದ ಅನ್ಯಾಯಕ್ಕೊಳಗಾದವರ ಪರವಾಗಿ ನಿಂತಿದ್ದರು.

Key words: belagavi- government –agree- self-retirement – district judge.