ಕ್ಷೇತ್ರದ ಜನರ ತಲೆಯಲ್ಲಿ ‘ಹಸ್ತ’ದ ಚಿಹ್ನೆ: ಹೂವು ಚಿಹ್ನೆ ಇರುವ ಸಾಹುಕಾರ್ ಗೆ ಮತಹಾಕಿ-ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮನವಿ…

Promotion

ಬೆಳಗಾವಿ,ನ,22,2019(www.justkannada.in): ಕಾಂಗ್ರೆಸ್ ನಲ್ಲಿ ಓರ್ವ ಸಾಹುಕಾರ್ ಇದ್ದಾನೆ.  ಕ್ಷೇತ್ರದ ಜನರ ತಲೆಯಲ್ಲಿ ಹಸ್ತದ ಚಿಹ್ನೆ ಕುಳಿತಿದೆ. ಹೀಗಾಗಿ ಹೂವು ಚಿಹ್ನೆ ಇರುವ ಸಾಹುಕಾರ್ ಗೆ ಮತ ಹಾಕಿ ಎಂದು ಗೋಕಾಕ್ ಕ್ಷೇತ್ರದ ಮತದಾರರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮನವಿ ಮಾಡಿದರು.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಖನಗಾಂವದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, ಐದು ಬಾರಿ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಈ ಬಾರಿ ನಾನು ಕಮಲ ಪಕ್ಷದ ಸಾಹುಕಾರ್.  ನಮ್ಮನ್ನ ಅನರ್ಹರು ವಿರೋಧಿಗಳು ಎಂದು ಅವಮಾನ ಮಾಡಿದ್ದಾರೆ. ಹೀಗಾಗಿ ಬಿಜೆಪಿಗೆ ಮತ ಹಾಕುವ ಮೂಲಕ ಪ್ರಚಂಡ ಬಹುಮತದಿಂದ ನನ್ನ ಗೆಲ್ಲಿಸಬೇಕು. ವಿರೋಧಿಗಳಿಗೆ ತಕ್ಕ ಉತ್ತರ ಕೊಡಬೇಕು ಎಂದು ತಿಳಿಸಿದರು.

ನಾನು ಕಮಲ ಪಕ್ಷದ ಸಾಹುಕಾರ್. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಹುಕಾರ್ ಇದ್ದಾನೆ ಹುಷಾರಾಗಿರಿ. ಕಮಲ ಚಿಹ್ನೆಗೆ ಮತನೀಡುವಂತೆ ಯುವಕರು ಟ್ರೈನಿಂಗ್ ಕೊಡಬೇಕು ಎಂದು ರಮೇಶ್ ಜಾರಕಿಹೊಳಿ ಹೇಳಿದರು. ನನ್ನ ವಿರೋಧಿಗಳು ಹೋರಾಟಗಾರರಲ್ಲ, ಕುತಂತ್ರವಾದಿಗಳು. ಮಾನಸಿಕ ಹಿಂಸೆ ನೀಡಿ ಹಿನ್ನಡೆಯಾಗಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

Key words:  belagavi-goakak- bjp- candidate-ramesh jarakiholi-appeal-vote