ಗ್ಯಾರಂಟಿ ಘೋಷಣೆ ಮಾಡುವ ಮುನ್ನ ಆರ್ಥಿಕ ಶಿಸ್ತಿನ ಬಗ್ಗೆ ಅರಿವಿರಲಿಲ್ಲವಾ..? ಸಿಎಂ ಮತ್ತು ಡಿಸಿಎಂಗೆ ಚಾಟಿ ಬೀಸಿದ ಹೆಚ್.ಡಿಕೆ.

Promotion

ಬೆಂಗಳೂರು,ಜೂ,2,2023(www.justkannada.in):   ಚುನಾವಣೆ ವೇಳೆ ಗ್ಯಾರಂಟಿ ಭರವಸೆ ಘೋಷಣೆ ಮುನ್ನ ಆರ್ಥಿಕ ಶಿಸ್ತಿನ ಬಗ್ಗೆ ಗೊತ್ತಿರಲಿಲ್ಲವೇ..? ಎಂದು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಾಟಿ ಬೀಸಿದರು.

ಗ್ಯಾರಂಟಿ ಯೋಜನೆ ಜಾರಿ ಕುರಿತು ಇಂದು ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ನನಗೂ ಫ್ರಿ ನಿನಗೂ ಫ‍್ರಿ ಅಂದಿದ್ರು.  ಆಗ ಆರ್ಥಿಕ ಶಿಸ್ತಿನ ಬಗ್ಗೆ ಅರಿವಿರಲಿಲ್ಲವಾ..? ಎಲ್ಲವನ್ನೂ ತಿಳಿದುಕೊಂಡೇ ಸಿದ್ದರಾಮಯ್ಯ ಹೇಳಿದ್ದಾರೆ. ಜನರ ಮುಂದೆ ಮಾತು ಕೊಟ್ಟವರು ಸಿದ್ಧರಾಮಯ್ಯ, ಡಿಕೆ ಶಿವಕುಮಾರ್.  ಷರತ್ತು ಬಗ್ಗೆ ಮಂತ್ರಿಗಳಿಂದ  ಉತ್ತರ ಪಡೆಯವೇಕು. ಹಾದಿ ಬೀದಿಯಲ್ಲಿ ಹೋಗುವ ಮಂತ್ರಿಗಳೆಲ್ಲರೂ ಮಾತನಾಡುತ್ತಾರೆ. ಕಾಂಗ್ರೆಸ್ ನವರ ಹೇಳಿಕೆ ನೋಡಿದ್ರೆ ಎಲ್ಲರೂ ಸಿಎಂ ಆಗಿಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಗ್ಯಾರಂಟಿಗಳ ಜಾರಿ ಬಗ್ಗೆ ಈಗಲೇ  ಚರ್ಚೆ ಮಾಡಲು ಹೋಗಲ್ಲ.  ಗ್ಯಾರಂಟಿ ಜಾರಿ ಬಗ್ಗೆ ಏನು ಮಾಡುತ್ತಾರೆ ನೋಡೋಣ .  ಸರ್ಕಾರದ ತೀರ್ಮಾನದ ಬಳಿಕ ನಮ್ಮ ಮುಂದಿನ ನಿರ್ಧಾರ. ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ನೋಡೋಣ ಎಂದು ಹೆಚ್.ಡಿಕೆ ತಿಳಿಸಿದರು.

Key words: Before -announcing -guarantee, – financial discipline-HD Kumaraswamy