ಬಿಇಡಿ ವಿದ್ಯಾರ್ಥಿನಿಯೊಬ್ಬರು ಗ್ರಾಪಂ ಸದಸ್ಯೆ…!

Promotion

ಚಾಮರಾಜನಗರ,ಡಿಸೆಂಬರ್,31,2020(www.justkannada.in) : ಜಿಲ್ಲೆಯ ಘಟನೆ ಹನೂರು ತಾಲೂಕಿನ ಎಲ್ಲೇಮಾಳ ಗ್ರಾಪಂನ ಬೋಡಮುತ್ತನೂರು ಗ್ರಾಮದಲ್ಲಿ ಬಿಇಡಿ ವಿದ್ಯಾರ್ಥಿನಿಯೊಬ್ಬರು ಗ್ರಾಪಂ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.jk-logo-justkannada-mysore

ವಿವಿಧ ಪಕ್ಷಗಳ ಕಾರ್ಯಕರ್ತರ ಜಿದ್ದಾಜಿದ್ದಿ, ಮುಖಂಡರ ಪ್ರತಿಷ್ಠೆ ನಡುವೆ ಕೊಳ್ಳೇಗಾಲದ ನಿಸರ್ಗ ಕಾಲೇಜಿನಲ್ಲಿ ಬಿಇಡಿ ಎರಡನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ಪ್ರಿಯದರ್ಶಿನಿ ಗ್ರಾಪಂ ಸದಸ್ಯೆಯಾಗಿದ್ದಾರೆ.

ಲಾಟರಿ ಎತ್ತುವ ಮೂಲಕ ಪ್ರಿಯದರ್ಶಿನಿ ಗೆಲುವುBED student,GRAPM,member ...!

5ನೇ ಬ್ಲಾಕ್ ನ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರಿಗೆ ಲಾಟರಿ ಮೂಲಕ ಅದೃಷ್ಟ ಖುಲಾಯಿಸಿ ವಿಜಯಮಾಲೆ ಧರಿಸಿದ್ದಾರೆ. ಪ್ರಿಯದರ್ಶಿನಿ. ಸಿ ಹಾಗೂ ಪ್ರತಿಸ್ಪರ್ಧಿ ಮಂಜುಳಾ.ಎಸ್ ಇಬ್ಬರೂ ಸಹ 287 ಸಮ ಮತಗಳು ಪಡೆದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ ಪ್ರಿಯದರ್ಶಿನಿ ಗೆಲುವಿನ ನಗೆ ಬೀರಿದ್ದಾರೆ.

key words : BED student-GRAPM-member …!