ಬೇಟೆಯಾಡಲು ಬಂದ ಹುಲಿಯನ್ನೇ ಅಟ್ಟಾಡಿಸಿದ ಕರಡಿ….

Promotion

ಮೈಸೂರು,ಸೆ,3,2019(www.justkannada.in): ಬೇಟೆಯಾಡಲು ಬಂದ ಹುಲಿಯನ್ನು ಕರಡಿಯೊಂದು ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಈ ಘಟನೆ ನಡೆದಿದೆ. ಕಬಿನಿ ಹಿನ್ನೀರಿನ ಸಫಾರಿ ವಲಯದಲ್ಲಿ ದಮ್ಮನಕಟ್ಟೆ ಅರಣ್ಯ ಪ್ರದೇಶದಿಂದ ಸಫಾರಿಗೆ ಹೋದ ಪ್ರವಾಸಿಗರು ಈ ವಿಡಿಯೋ ಅನ್ನು ವೈರಲ್ ಮಾಡಿದ್ದಾರೆ. ಕಬಿನಿ ಹಿನ್ನೀರು ಪ್ರದೇಶದಲ್ಲಿ ಬೇಟೆಯಾಡಲು ಬಂದ ಹುಲಿಯನ್ನು ನೋಡಿದ ಕರಡಿ ತಕ್ಷಣವೇ ಹುಲಿ ಮೇಲಿಯೇ  ದಾಳಿ ಮಾಡಿದೆ.

ಕರಡಿ ದಾಳಿ ಮಾಡುತ್ತಿದ್ದಂತೆ ನನಗೆ ದಕ್ಕದ ಬೇಟೆಯೆಂದು ಹುಲಿ ಅಲ್ಲಿಂದ ಕಾಲ್ಕತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Key words: bear –attack-tiger – hunt-nagarahole- National Park