ಬಿಡಿಎ ಹಮ್ಮಿಕೊಂಡಿದ್ಧ ಇ-ಹರಾಜು ಪ್ರಕ್ರಿಯೆ ಮುಕ್ತಾಯ: ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.

ಬೆಂಗಳೂರು,ಡಿಸೆಂಬರ್,31,2021(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2021ರ ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಇ-ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಟ್ಟು 372 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಿದ್ದು, 296 ನಿವೇಶನಗಳು ಮಾರಾಟವಾಗಿದೆ. ಯಶಸ್ವಿಯಾಗದ ಬಿಡ್‌ ದಾರರಿಗೆ ಪ್ರಾರಂಭಿಕ ಠೇವಣಿ ಹಣವನ್ನು ಹಿಂದಿರುಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಬಿಡಿಎ ತಿಳಿಸಿದೆ.

296 ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 215 ಕೋಟಿಗಳಾಗಿದ್ದು, ಸದರಿ ನಿವೇಶನಗಳು ರೂ. 348 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 133 ಕೋಟಿಗಳಷ್ಟು ಅಧಿಕ ಆದಾಯ ಸಂಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 118 ಮೂಲೆ ನಿವೇಶನಗಳನ್ನು ಇ-ಹರಾಜಿನಲ್ಲಿ ಪ್ರಕಟಿಸಲಾಗಿದ್ದು, ಇವುಗಳಲ್ಲಿ 80 ಮೂಲೆ ನಿವೇಶಗಳು ಹರಾಜಿನಲ್ಲಿ ಮಾರಾಟವಾಗಿದೆ. ಸದರಿ ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 44.28 ಕೋಟಿಗಳಾಗಿದ್ದು, ರೂ. 63.59 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 19.31 ಕೋಟಿಗಳಷ್ಟು ಅಧಿಕ ಆದಾಯ ಮೊತ್ತ ಸಂಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗರಿಷ್ಠ ರೂ. 6,608/- ಪ್ರತಿ ಚದರ ಅಡಿ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ಗರಿಷ್ಠ ರೂ. 14,368/- ಪ್ರತಿ ಚದರ ಅಡಿಗೆ ಮಾರಾಟವಾಗಿದೆ. ಮುಂದಿನ ಜನವರಿ ಮಾಹೆಯಲ್ಲಿ ಸುಮಾರು 500 ಮೂಲೆ ನಿವೇಶನಗಳು ಹಾಗೂ 500 ಮಧ್ಯಂತರ ನಿವೇಶನಗಳ ಇ-ಹರಾಜು ನಡೆಸಲಾಗುವುದು.

Key words: BDA-e-auction-process-good -response – public.