Tuesday, September 15, 2026

BDA Apartments

ಭಾರತೀಯ ಕ್ರಿಕೆಟಿಗರ ಸಂಘಕ್ಕೆ ನೆರವು ನೀಡಿದ ಬಿಸಿಸಿಐ BDA JK_Adv BDA Adv
Home Front Page ಭಾರತೀಯ ಕ್ರಿಕೆಟಿಗರ ಸಂಘಕ್ಕೆ ನೆರವು ನೀಡಿದ ಬಿಸಿಸಿಐ

ಭಾರತೀಯ ಕ್ರಿಕೆಟಿಗರ ಸಂಘಕ್ಕೆ ನೆರವು ನೀಡಿದ ಬಿಸಿಸಿಐ

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಭಾರತೀಯ ಕ್ರಿಕೆಟಿಗರ ಸಂಘಕ್ಕೆ (ಐಸಿಎ) ರವಿವಾರ ಬಿಸಿಸಿಐ 2 ಕೋಟಿ ರೂ. ಅನುದಾನ ನೀಡಿದೆ.

ಐಸಿಎಗೆ 2 ಕೋಟಿ ರೂ. ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಅನುದಾನವನ್ನು ಬಯಸಿದರೆ, ನಾವು ಹೆಚ್ಚಿನದನ್ನು ಮಂಜೂರು ಮಾಡುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನೇಮಕ ಮಾಡಿದ ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ರೂಪುಗೊಂಡ ಭಾರತದ ಮೊಟ್ಟಮೊದಲ ಆಟಗಾರರ ಸಂಘವಾಗಿರುವ ಐಸಿಎ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಚನೆಯಾದ ಬಳಿಕ ತನ್ನ ಕಾರ್ಯಾಚರಣೆಗೆ 15-20 ಕೋಟಿ ರೂ.ಗಳ ತಾತ್ಕಾಲಿಕ ಬಜೆಟ್‌ನ್ನು ಸಿದ್ಧಪಡಿಸಿತ್ತು ಮತ್ತು 5 ಕೋಟಿ ರೂ.ಗಳ ಆರಂಭಿಕ ಅನುದಾನವನ್ನು ಬಯಸಿತ್ತು. ಆದರೆ ಇದೀಗ 2 ಕೋಟಿ ರೂ.ಗಳನ್ನು ಪಡೆದುಕೊಂಡಿದೆ.