Bjp v/s bjp ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ  ನಡೆಯುತ್ತಿರುವ ಕಾಳಗವೇ ಸಾಕ್ಷಿ- ರಾಜ್ಯ ಕಾಂಗ್ರೆಸ್ ಟಾಂಗ್.

kannada t-shirts

ಮೈಸೂರು,ನವೆಂಬರ್,16,2022(www.justkannada.in):  ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ಘಟಕ ಟಾಂಗ್ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, Bjp vs bjp ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ.  ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು bjp ತಮ್ಮ ಮನೆಯ ಕಾವಲಿಯ ತೂತುನ್ನು ನೋಡಿಕೊಂಡರೆ ಒಳಿತು ಎಂದು ಟೀಕಿಸಿದೆ.

ಹಿಂದೆ ಬ್ಯಾರಿಕೆಡ್ ಮುರಿದಿದ್ದ ಸಂಸದ ಪ್ರತಾಪ್ ಸಿಂಹ ಈಗ ಮೈಸೂರಿನ ಬಸ್ ನಿಲ್ದಾಣ ಒಡೆಯುತ್ತೇನೆ ಎನ್ನುತ್ತಿದ್ದಾರೆ. ಬಸ್ ನಿಲ್ದಾಣಕ್ಕೆ ಜೆಸಿಬಿ ನುಗ್ಗಿಸುತ್ತೇನೆ ಎನ್ನುವ ಸಂಸದರ ಮನೆಗೆ ಜೆಸಿಬಿ ನುಗ್ಗಿಸಬೇಕು, ಏಕೆಂದರೆ, ಸಾರ್ವಜನಿಕ ಆಸ್ತಿ ಹಾನಿಪಡಿಸುವವರ ಆಸ್ತಿ ಮಟ್ಟುಗೋಲು ಹಾಗೂ ಜೆಸಿಬಿ ನುಗ್ಗಿಸುವುದು ಇವರದ್ದೇ ಪಕ್ಷದ ಆಗ್ರಹಗಳಲ್ಲವೇ? ಎಂದು ರಾಜ್ಯಕಾಂಗ್ರೆಸ್ ಕಿಡಿಕಾರಿದೆ.

Key words: battle -Mysore -Bjp vs bjp -fight -State -Congress

ENGLISH SUMMARY…

Row over ‘Gumbaz’ bus stop: State Cong. ridicules BJP v/s BJP fight
Mysuru, November 16, 2022 (www.justkannada.in): The Karnataka State Congress Committee has ridiculed the row between BJP leaders in Mysuru on the row over the ‘Gumbaz’ type bus stop.
In a tweet, the State Congress said the fight between BJP leaders MP Pratap Simha and MLA S. A. Ramadas is proof of the fire inside the BJP. “The MP is set to demolish the bus stop constructed by the MLA of his party. Instead of finding fault in others let the BJP first look at its problems,” the tweet read.
“Earlier the MP Pratap Simha had once broken a barricade, and now he says he will demolish the bus stop. He says he will run a JCB over the bus stop. The JCB should be the first run over on his house. After all, taking over the properties of those who destroy public properties, running over JCBs are all BJP’s moves,” the tweet further read.
Keywords: BJP/ State Congress/ bus stop

website developers in mysore