ಕಾಂಗ್ರೆಸ್ ನಿಂದ ಆಧಾರ ರಹಿತ ಆರೋಪ: ಗಾಳಿಯಲ್ಲಿ ಗುಂಡು ಹೊಡೆಯುವವರಿಗೆ ಉತ್ತರಿಸಬೇಕಿಲ್ಲ- ಡಿಸಿಎಂ ಅಶ್ವಥ್ ನಾರಾಯಣ್…

ಬೆಂಗಳೂರು,ಜು,23,2020(www.justkannada.in):  ಕೊರೋನಾ ಮೆಡಿಕಲ್ ಕಿಟ್ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಕಿಡಿಕಾರಿದರು.jk-logo-justkannada-logo

ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಮಾಡಿದ್ದು ಈ ಕುರಿತು ಐವರು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದರು. ಈ ವೇಳೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕಾಂಗ್ರೆಸ್ ನಾಯಕರು  ಪ್ರತಿಭಾರಿ ಆರೋಪ ಮಾಡುತ್ತಲೇ ಇದ್ರು. ಆದರೆ ನಾವು ಸದನದಲ್ಲಿ ಉತ್ತರ ನೀಡಲು ಸಿದ್ಧರಿದ್ದವು. ಈ ನಡುವೆ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ. ಆರೋಗ್ಯ ಇಲಾಖೆಯಲ್ಲಿ 750 ಕೋಟಿ ರೂ ಖರ್ಚು ಎಂದಿದ್ದಾರೆ.  ಆದ್ರೆ ನಾವು ಖರ್ಚು ಮಾಡಿದ್ದು 290 ಕೋಟಿ ಮಾತ್ರ. ಕಾಂಗ್ರೆಸ್ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಮಾಲೆ ಕಣ್ಣಿಗೆ ಕಾಣಿಸುವುದೆಲ್ಲ ಹಳದಿಯೇ, ಈ ಮುಂಚೆಯೂ ಸಾಕಷ್ಟು ಆಪಾದನೆ ಮಾಡಿದ್ದರು. ನಾವು ಇಲಾಖಾವಾರು ಅನುಮಾನುಗಳಿಗೆ ಉತ್ತರ ಕೊಡುತ್ತೇವೆ.  ಪಿಪಿಇ ಕಿಟ್​ ಖರೀದಿಯಲ್ಲೂ ಸಹ ಅಕ್ರಮ ನಡೆದಿಲ್ಲ. ಹೀಗಾಗಿ ಕಾಂಗ್ರೆಸ್​ನವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆಯುವವರಿಗೆ ಉತ್ತರ ನೀಡಬೇಕಿಲ್ಲ. ವಿಷಯ ಗೊತ್ತಿಲ್ಲದೇ ಆರೋಪ ಮಾಡೋದು ಸರಿಯಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್  ವಾಗ್ದಾಳಿ ನಡೆಸಿದರು.Baseless -allegations –Congress-DCM -Ashwath Narayan.

ಚೀನಾದಿಂದ ಪಿಪಿಇ ಕಿಟ್ ಖರೀದಿಸಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಪಿಪಿಇ ಕಿಟ್ ತರಿಸಲಾಗಿತ್ತು. ಆ ವೇಳೆ ಯಾವುದೇ ಸಂಘರ್ಷ ಆಗಿರಲಿಲ್ಲ ಚೀನಾ ಜತೆಗಿನ ಸಂಬಂಧ ಚೆನ್ನಾಗಿದ್ದ ಸಂದರ್ಭದಲ್ಲಿ ಪಿಪಿಇ ಕಿಟ್ ತರಿಸಲಾಗಿತ್ತು. ಈ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೇ ಮಾತನಾಡುವುದು ಸರಿಯಲ್ಲ ಎಂದು ಅಶ್ವಥ್ ನಾರಾಯಣ್ ಹೇಳಿದರು.

Key words: Baseless -allegations –Congress-DCM -Ashwath Narayan.