ಏಕಾಏಕಿ ಬೆಂಕಿಬಿದ್ದು, ಹೊತ್ತಿ ಉರಿದ ಚಲಿಸುತ್ತಿದ್ದ ಕಾರು: ಚಾಲಕನ ಸಮಯಪ್ರಜ್ನೆಯಿಂದ ಕಾರಲ್ಲಿದ್ದವರು ಪಾರು

Promotion

ಬೆಂಗಳೂರು:ಮೇ-21:(www.justkannada.in) ಚಲಿಸುತ್ತಿದ್ದ ಫೋರ್ಡ್‌ ಐಕಾನ್‌ ಕಾರಿನಲ್ಲಿ ದಿಢೀರ್‌ ಬೆಂಕಿಬಿದ್ದ ಪರಿಣಾಮ ಕಾರು ಸಂಪೂರ್ಣ ಸುಣ್ಣು ಕರಕಲಾದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ನಡೆದಿದೆ.

ಮಂಗಮ್ಮನಪಾಳ್ಯದಿಂದ ಕಗ್ಗಲಿಪುರದ ಕಡೆ ಸಾಗುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ಕಾರಿನ ತುಂಬೆಲ್ಲ ಹೊತ್ತಿಕೊಂದಿದೆ. ಕಾರಿನಲ್ಲಿದ್ದ ಮಾಲೀಕ ಈಶ್ವರಪ್ಪ ಮತ್ತು ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಗಳ ಮದುವೆಗೆ ಆಹ್ವಾನ ಪತ್ರಿಕೆ ವಿತರಣೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಚಾಲಕ ಪ್ರಶಾಂತ್‌ ಅವರ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆ ಬದಿ ಕಾರು ನಿಲ್ಲಿಸಿದ ಚಾಲಕ, ಕಾರಿನ ಗಾಜು ಒಡೆದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದರಾದರೂ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು.

ಏಕಾಏಕಿ ಬೆಂಕಿಬಿದ್ದು, ಹೊತ್ತಿ ಉರಿದ ಚಲಿಸುತ್ತಿದ್ದ ಕಾರು: ಚಾಲಕನ ಸಮಯಪ್ರಜ್ನೆಯಿಂದ ಕಾರಲ್ಲಿದ್ದವರು ಪಾರು

Bangalore,moving car, got fire,completely burnt