ತಪ್ಪಿಸಿಕೊಳ್ಳಲು ಮುಂದಾದ ರೌಡಿಶೀಟರ್​​​ ಮೇಲೆ ಪೊಲೀಸರ ಫೈರಿಂಗ್: ಆರೋಪಿ ಕಾಲಿಗೆ ಗುಂಡು

ಬೆಂಗಳೂರು:ಜುಲೈ-22:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಪೊಲೀಸ್ ಫೈರಿಂಗ್ ನಡೆದಿದೆ. ಕಾಟನ್​​ಪೇಟೆ ಬಳಿ ರೌಡಿಶೀಟರ್​​​ ಮೇಲೆ ಪೊಲೀಸರು ಶೂಟೌಟ್​​ ನಡೆಸಿ ಬಂಧಿಸಿದ್ದಾರೆ.

ಅನಿಲ್​​​ (32) ಶೂಟೌಟ್​​ಗೆ ಒಳಗಾದ ಆರೋಪಿ. ಚಾಮರಾಜಪೇಟೆ​​​​​​ ಸಬ್​​ ಇನ್ಸ್​​ಪೆಕ್ಟರ್​​​​​ ಕುಮಾರಸ್ವಾಮಿ ಎಂಬುವವರಿಂದ ಶೂಟೌಟ್​​ ನಡೆಸಲಾಗಿದ್ದು, ತಡರಾತ್ರಿ 12.55 ಗಂಟೆಗೆ ಕಾಟನ್​​ ಪೇಟೆಯ ವೆಟರ್ನರಿ ಹಾಸ್ಪಿಟಲ್ ಹಿಂಭಾಗದಲ್ಲಿ ಫೈರಿಂಗ್ ನಡೆದಿದೆ.

ಆರೋಪಿ ಅನಿಲ್​​​ ಕಳೆದ ತಿಂಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದನ. ಖಚಿತ ಮಾಹಿತಿಯ ಆಧಾರದ ಮೇಲೆ ನಿನ್ನೆ ರಾತ್ರಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಆರೋಪಿ ಶರಣಾಗದೆ ಪೋಲಿಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಆತ್ಮರಕ್ಷಣೆಗಾಗಿ ಸಬ್​​ ಇನ್ಸ್​​ಪೆಕ್ಟರ್​​ ತಮ್ಮ ಬಳಿಯಿದ್ದ ಪಿಸ್ತೂಲ್​ನಿಂದ ಆರೋಪಿಯ ಕಾಲಿಗೆ ಫೈರಿಂಗ್​​ ಮಾಡಿದ್ದಾರೆ.

ಈ ಘಟನೆಯಲ್ಲಿ ಪೇದೆ ಚಂದ್ರಶೇಖರ್​​​ ಪಾಟೀಲ್​​​ ಎಂಬುವವರ ಎಡ ಭುಜಕ್ಕೆ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪೇದೆ ಹಾಗೂ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಪ್ಪಿಸಿಕೊಳ್ಳಲು ಮುಂದಾದ ರೌಡಿಶೀಟರ್​​​ ಮೇಲೆ ಪೊಲೀಸರ ಫೈರಿಂಗ್: ಆರೋಪಿ ಕಾಲಿಗೆ ಗುಂಡು
bangalore,midnight,shoot out,rowdy sheeter