ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ: ಸುದೀಪ್ ಅಭಿಮಾನಿಗಳಿಗೆ ಬೇಸರ

ಬೆಂಗಳೂರು, ಜುಲೈ 22, 2019 (www.justkannada.in): ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ.

ಮೊದಲು ನಿಗದಿಯಾಗಿದಂತೆ ಆಗಸ್ಟ್ 8ಕ್ಕೆ ಸಿನಿಮಾ ಬಿಡುಗಡೆ ಆಗಬೇಕಾಗಿತ್ತು. ಬಳಿಕ ಆ ದಿನಾಂಕ ಆಗಸ್ಟ್ 29ಕ್ಕೆ ಮುಂದೆಕ್ಕೆ ಹೋಗಿತ್ತು. ಇದೀಗ ಮತ್ತೆ ಸಿನಿಮಾದ ಬಿಡುಗಡೆ ದಿನಾಂಕ ಪೋಸ್ಟ್ ಪೋನ್ ಆಗಿದೆ. ಈ ಬಗ್ಗೆ ನಿರ್ದೇಶಕ ಕೃಷ್ಣ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಪ್ಯಾನ್ ಇಂಡಿಯಾ ರಿಲೀಸ್ ಹಿನ್ನೆಲೆಯಲ್ಲಿ ಪೈಲ್ವಾನ್ ರಿಲೀಸ್ ಡೇಟ್ ಮುಂದಕ್ಕೆ ಹಾಕಲಾಗಿದೆಯಂತೆ. ಅದರಲ್ಲಿಯೂ ಹಿಂದಿ ಮತ್ತು ತೆಲುಗು ಭಾಷೆಯ ಬಿಡುಗಡೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಜೊತೆಗೆ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮದ ಕೂಡ ಮುಂದಕ್ಕೆ ಹೋಗಿದೆಯಂತೆ.