ಪತ್ನಿಯ ಫೋಟೋಗಳನ್ನು ಸ್ನೇಹಿತರಿಗೆ ಕಳುಹಿಸಿ ಬ್ಲಾಕ್ ಮೇಲ್: ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆಯಿಂದ ದೂರು…

Promotion

ಬೆಂಗಳೂರು:ಜೂ-3:(www.justkannada.in) ಪತ್ನಿಯ ಫೋಟೋಗಳನ್ನು ತೆಗೆದು, ತನ್ನ ಸ್ನೇಹಿತರಿಗೆ ಕಳುಹಿಸಿ, ಅಕ್ರಮ ಸಂಬಂಧವಿದೆ ಎಂದು ಸುದ್ದಿ ಹಬ್ಬಿಸುವುದಾಗಿ ಬ್ಲಾಕ್ ಮೇಲ್ ಮಾಡಿ, ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೃಂದಾವನ ನಗರ ನಿವಾಸಿ ರಾಜೇಶ್ (34) ಮತ್ತು ಅತ್ತೆ-ಬಾವನ ವಿರುದ್ಧ ಮಹಿಳೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. 2010ರಲ್ಲಿ ರಾಜೇಶ್ ನನ್ನು ಮದುವೆಯಾಗಿದ್ದು, ಇವರಿಗೆ ಮಗಳು ಕೂಡ ಇದ್ದಾಳೆ.

ಮದ್ಯ ವ್ಯಸನಿಯಾಗಿದ್ದ ರಾಜೇಶ್ ತನ್ನ ಪುಟ್ಟ ಮಗುವಿಗೂ ಸಿಗರೇಟ್ ಸೇದುವಂತೆ, ಮಧ್ಯ ಕುಡಿಯುವಂತೆ ಹಿಂಸಿಸುತ್ತಿದ್ದ. ಸ್ನೇಹಿತರ ಜೊತೆ ಮನೆಯಲ್ಲಿ ಪಾರ್ಟಿ ನಡೆಸುತ್ತ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಮಹಿಳೆಯ ತಾಯಿ ಮನೆಯವರು ಸುಮಾರು 4 ಲಕ್ಷ ರೂಪಾಯಿ ನೀಡಿದ್ದರು. ಈ ಸಂದರ್ಭದಲ್ಲಿ ಬೇರೆ ಮಹಿಳೆಯರೊಂದಿಗೆ ರಾಜೇಶ್ ಗೆ ಸ್ನೇಹವಿರುವುದು ಗೊತ್ತಾಗಿ ಪ್ರಶ್ನಿಸಿದಾಗ ಜಗಳ ಹಾಗೂ ಚಿತ್ರ ಹಿಂಸೆ ನೀಡುವುದು ಹೆಚ್ಚಾಗಿತ್ತು.

ಇದು ವಿಪರೀತವಾದಾಗ ತನ್ನ ಪತ್ನಿಗೆ ನಗ್ನವಾಗಿ ನಿಲ್ಲುವಂತೆ ಬೆದರಿಸಿ, ಫೋಟೋ ತೆಗೆದು ಸ್ನೇಹಿತರಿಗೆ ಕಳುಹಿಸಿ ನಿನಗೆ ನನ್ನ ಸ್ನೇಹಿತರ ಜೊತೆ ಅಕ್ರಮ ಸಂಬಂಧವಿದೆ ಎಂದು ಸುದ್ದಿ ಹಬ್ಬಿಸುವುದಾಗಿ ಹಾಗೂ ಫೋಟೋ ಗಳನ್ನು ಅಪ್ ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಮಹಿಳೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ಹಾಗೂ ಅತ್ತೆ, ಭಾವನ ವಿರುದ್ಧವೂ ದೂರು ದಾಖಲಿಸಿದ್ದಾರೆ.

ಪತ್ನಿಯ ಫೋಟೋಗಳನ್ನು ಸ್ನೇಹಿತರಿಗೆ ಕಳುಹಿಸಿ ಬ್ಲಾಕ್ ಮೇಲ್: ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ
Bangalore,Husband circulates wife’s nude photos, blackmails for dowry