ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಸೆರೆ…

ಮೈಸೂರು,ಜೂ,3,2019(www.justkannada.in): ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಗಂಡು ಚಿರತೆಯನ್ನ ಸೆರೆ ಹಿಡಿಯಲಾಗಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹಾರೂಪುರ ಗ್ರಾಮದ ಆಸುಪಾಸಿನಲ್ಲಿ ಪ್ರತ್ಯಕ್ಷಗೊಂಡು‌ ಜನ ಜಾನುವಾರುಗಳಲ್ಲಿ ಗಂಡು ಚಿರತೆ  ಭೀತಿ ಹುಟ್ಟಿಸಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಂದು ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.

ಗ್ರಾಮಸ್ಥರ ಮನವಿ ಆಲಿಸಿದ ಅರಣ್ಯ ಇಲಾಖೆ ಕಳೆದ ನಾಲ್ಕು ದಿನಗಳ ಹಿಂದಿ ರಾಮಕೃಷ್ಣ ಅವರ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. ಇದೀಗ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಚಿರತೆ ಸೆರೆಸಿಕ್ಕ ಸುದ್ದಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆಯನ್ನ ಸ್ಥಳಾಂತರ ಮಾಡಿದ್ದಾರೆ. ಗಾಬರಿಗೊಂಡ ಚಿರತೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿದೆ.

Key words:  leopard that fell to the bow.

#HDkote #leopard #fell #bow.