ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ:  ಕೌಟುಂಬಿಕ ಕಲಹಕ್ಕೆ ಮೂವರು ಬಲಿ…

Promotion

ಬೆಂಗಳೂರು,ಆ,12,2019(www.justkannada.in): ಇಬ್ಬರು ಮಕ್ಕಳನ್ನ ನೇಣು ಬಿಗಿದು ನಂತರ ತಾನು ನೇಣುಬಿಗಿದು ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಶ್ರೀನಗರದಲ್ಲಿ ಈ ಘಟನೆ ನಡೆದಿದೆ. ರಾಜೇಶ್ವರಿ(43) ನೇಣಿಗೆ ಶರಣಾದ ಮಹಿಳೆ. ಇಬ್ಬರು ಹೆಣ್ಣುಮಕ್ಕಳಾದ ಮಾನಸ(17) ಭೂಮಿಕಾಗೂ  ತಾಯಿ ರಾಜೇಶ್ವರಿ ನೇಣುಬಿಗಿದು ಹತ್ಯೆ ಮಾಡಿ ನಂತರ ತಾನೂ ನೇಣಿಗೆ ಕೊರಳೊಡ್ಡಿದ್ದು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದೆ. ಈಕುರಿತು ಪ್ರಕರಣ ದಾಖಲಾಗಿದೆ.

Key words: Bangalore-Three dead- mother- Daughters