ಅಂಗಡಿಗೆ ಬೆಂಕಿ : ಮಾಲೀಕ ಸಜೀವ ದಹನ…

Promotion

ಬೆಂಗಳೂರು,ಜು,24,2020(www.justkannada.in):  ಗ್ರಂಥಿಗೆ ಅಂಗಡಿಗೆ  ಬೆಂಕಿ ಹೊತ್ತಿಕೊಂಡು ಅಂಗಡಿ ಮಾಲೀಕ ಸಜೀವದಹನವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.jk-logo-justkannada-logo

ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿನ ಗ್ರಂಥಿಗೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಮನು ಕುಮಾರ್ ಸಜೀವದಹನವಾದ ಅಂಗಡಿ ಮಾಲೀಕ.  ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಗೊಂಡಿದೆ ಎಂದು ಶಂಕಿಸಲಾಗಿದೆ. ಅಂಗಡಿಗೆ ಬೆಂಕಿ ಹೊತ್ತಿಗೊಂಡ ವೇಳೆ ಅಲ್ಲಿ ಸಿಲುಕಿದ್ದ ಮಾಲೀಕ ಮನುಕುಮಾರ್ ಸಜೀವದಹನವಾಗಿದ್ದು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.bangalore-shop-fire- Owner- death

ಅವಶೇಷಗಳ ಪರಿಶೀಲನೆ ವೇಳೆ ಮಾಲೀಕನ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಪ್ರಭಾರ ಡಿಸಿಪಿ ಶಶಿ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words:  bangalore-shop-fire- Owner- death