ಬೆಂಗಳೂರು ಗಲಭೆ ಪ್ರಕರಣ: ಬಂಧಿತರು ಅಮಾಯಕರೆಂದ ಕಾಂಗ್ರೆಸ್  ವಿರುದ್ದ ಮೈಸೂರು ಜಿಲ್ಲಾ ಬಿಜೆಪಿ ವಕ್ತಾರ ವಾಗ್ದಾಳಿ…

Promotion

ಮೈಸೂರು,ಆ,19,2020(www.justkannada.in):  ಬೆಂಗಳೂರಿನ ಕೆ.ಜಿಹಳ್ಳಿ ಮತ್ತು ಡಿಜೆ ಹಳ್ಳಿ ಘಟನೆ ಗಲಭೆಕೋರರ ಪರವಾಗಿ ಕಾಂಗ್ರೆಸ್  ನಿಂತಿದೆ. ಫೇಸ್ಬುಕ್ ನ ಪೋಸ್ಟ್ ವಿಚಾರವನ್ನು ಮುಂದಿಟ್ಟುಕೊಂಡು ಪುಂಡರು ನಡೆಸಿದ ದಾಳಿಯನ್ನು ಸಮರ್ಥಿಸುವ ಮೂಲಕ ಕಾಂಗ್ರೆಸ್‌ ಕಾನೂನುನನ್ನು ಅಪಹಾಸ್ಯ ಮಾಡುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಮೈಸೂರು ಬಿಜೆಪಿ ಜಿಲ್ಲಾ ವಕ್ತಾರ  ಡಾ.ಕೆ. ವಸಂತ ಕುಮಾರ್  ವಾಗ್ದಾಳಿ ನಡೆಸಿದರು.jk-logo-justkannada-logo

ಈ ಕುರಿತು ಪ್ರತಿಕ್ರಿಯಿಸಿದ  ಡಾ.ಕೆ. ವಸಂತ ಕುಮಾರ್ , ಗಲಭೆಗೆ  ಪ್ರಚೋದನೆ ನೀಡಿ ದಾಳಿಕೋರರನ್ನು ಸಂಘಟನೆ ಮಾಡಿರುವುದು ಕಾಂಗ್ರೆಸ್ ಕಾರ್ಪೊರೇಟರ್ ಗಳು.  ಹಾಗೇ ದಾಳಿಯಲ್ಲಿ ಪಾಲ್ಗೊಂಡು ವಿಧ್ವಂಸಕ ಕೃತ್ಯ ನಡೆಸಿರುವ ಪುಂಡರು ಇದೇ ಕಾಂಗ್ರೆಸ್ ಸಾಕಿರುವ ಎಸ್ಡಿಪಿಐ ಕಾರ್ಯಕರ್ತರು.

ಸರ್ಕಾರ ಅಮಾಯಕರನ್ನು ಬಂಧಿಸುತ್ತಿದೆ. ಬಂಧಿತರೆಲ್ಲಾ ಅಮಾಯಕರು ಎಂದು ಹೇಳುವ ಮೂಲಕ ಕಾಂಗ್ರೆಸ್ ಗಲಭೆಕೋರರನ್ನು ಸಮರ್ಥನೆ ಮಾಡುತ್ತಿರುವುದು ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹ. ಇಂತಹ ಕಾನೂನು ಬಾಹಿರ ಕೃತ್ಯ ನಡೆಸಿರುವ ಪುಂಡರನ್ನು ,ದ್ರೋಹಿಗಳನ್ನು ವಿರೋಧಿಸದೆ ಅವರಿಗೆ ಪ್ರತ್ಯಕ್ಷವಾಗಿ ಸಹಕಾರ ನೀಡಿ ತನ್ನ ರಾಜಕೀಯ ಮಲತಾಯಿ ಧೋರಣೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.Bangalore -riot case-Mysore –District- BJP- Spokesman -Claims Arrest

ವಿಚಾರಣೆ ವೇಳೆಯಲ್ಲಿ ಗಲಭೆಯಲ್ಲಿ ಪಾಲ್ಗೊಂಡ ಎಲ್ಲಾರು ತಪ್ಪೋಪ್ಪಿಗೆ ಒಪ್ಪಿಕೊಂಡರೂ ಕಾಂಗ್ರೆಸ್ ಅಧ್ಯಕ್ಷರು ಸಮರ್ಥನೆಗೆ ನಿಂತಿರುವುದು ಖಂಡನೀಯ ಎಂದು ಮೈಸೂರು ಬಿಜೆಪಿ ಜಿಲ್ಲಾ ವಕ್ತಾರ ಡಾ.ಕೆ .ವಸಂತ ಕುಮಾರ್ ಕಿಡಿಕಾರಿದರು.

Key words: Bangalore -riot case-Mysore –District- BJP- Spokesman -Claims Arrest