ವಂಚನೆ ಪ್ರಕರಣ: ರಜನಿಕಾಂತ್ ಪತ್ನಿಗೆ ಬೆಂಗಳೂರು ಪೊಲೀಸರಿಂದ ನೋಟಿಸ್

Promotion

ಬೆಂಗಳೂರು, ಮೇ 13, 2019 (www.justkannada.in): ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ನೀಡಿದ್ದಾರೆ.

2015ರಲ್ಲಿ ದಾಖಲಾಗಿದ್ದ ನಕಲಿ ದಾಖಲೆ ಪತ್ರ ಬಳಕೆ ಕೇಸ್ ಸಂಬಂಧ ಮತ್ತೊಮ್ಮೆ ನೋಟಿಸ್ ಜಾರಿ ಮಾಡಲಾಗಿದೆ. ಜಾಹೀರಾತು ಕಂಪನಿಯೊಂದಕ್ಕೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಈ ಹಿಂದೆ ಕೂಡಾ ನೋಟಿಸ್ ನೀಡಲಾಗಿತ್ತು.

ಎರಡು ಬಾರಿ ವಿಚಾರಣೆಗೆ ಹಾಜರಾಗಿರಲಿಲ್ಲ. ಮೇ 20ರ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ರಜನಿ ಪತ್ನಿ ಲತಾ ಉತ್ತರ ನೀಡಿದ್ದಾರೆ. ಮೇ20 ರಂದು ಹಲಸೂರು ಗೇಟ್ ಠಾಣೆ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಬೇಕಿದೆ.