ಜೂ.8ರಿಂದ ಮಸೀದಿ, ಓಪನ್ ಗೆ ಅನುಮತಿ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ….

ಬೆಂಗಳೂರು, ಮೇ,31,2020(www.justkannada.in):ಜೂ.8ರಿಂದ ಮಸೀದಿ, ದರ್ಗಾ ಓಪನ್ ಗೆ ಅನುಮತಿ ನೀಡಿರುವ ಹಿನ್ನೆಲೆ   ಅಲ್ಪಸಂಖ್ಯಾತ ಆಯೋಗ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಎಲ್ಲರೂ ಮನೆಯಲ್ಲೇ ಸ್ವಚ್ಛತೆ ಮಾಡಿಕೊಂಡು ಬರಬೇಕು. ಮಸೀದಿ ಒಳಗೆ ಹೋಗಲು ಬರಲು ಒಂದೇ ದ್ವಾರ. ಪ್ರಾರ್ಥನೆಗೂ ಮುನ್ನ ಸಭಾಂಗಣದಲ್ಲಿ ಪ್ಯೂಮಿಗೇಷನ್. ಪ್ರಾರ್ಥನಾ ಸಭಾಂಗಣ ಪ್ರವೇಶಕ್ಕೂ ಮುನ್ನ ಎಲ್ಲಾ ಮುಸ್ಲೀಮರ ದೇಹದ ತಾಪಮಾನ ಪರೀಕ್ಷಿಸಬೇಕು.
ಮಸೀದಿಯಲ್ಲಿ ಕಡ್ಡಾಯವಾಗಿ 1ರಿಂದ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು. 10ರಿಂದ 15 ನಿಮಿಷಗಳಲ್ಲಿ ಪ್ರಾರ್ಥನೆ ಮುಗಿಸಬೇಕು. ಸುನ್ನತ್ ನಫೀಲ್ ಪ್ರಾರ್ಥನೆ ಮನೆಯಲ್ಲೆ ಮಾಡಬೇಕು. ಮಸೀದಿ ಅವರಣದಲ್ಲಿ ನಿಂತು ಯಾರು ಚರ್ಚೆ ಮಾಡಬಾರದು.