BANGALORE CRIME NEWS : ಬೆಂಗಳೂರಿನಲ್ಲಿ ಫುಟ್ಬಾಲ್ ಸ್ಟೇಡಿಯಂನಲ್ಲಿ ರೌಡಿಶೀಟರ್ ಬರ್ಬರ ಹತ್ಯೆ.

kannada t-shirts

 

ಬೆಂಗಳೂರು, ಸೆಪ್ಟೆಂಬರ್ ೧೨, ೨೦೨೧ (www.justkannada.in news ): ಭಾರತಿನಗರ ಪೊಲೀಸ್ ಠಾಣೆಯಲ್ಲಿ ಇಂದು ಸಂಜೆ ಸುಮಾರು ೪ ಗಂಟೆ ಹೊತ್ತಿಗೆ ೪-೫ ಮಂದಿ ಸೇರಿ ರೌಡಿಶೀಟರ್ ಒಬ್ಬನ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಮಾಹಿತಿಯ ಪ್ರಕಾರ 30 ವರ್ಷದ ಅರವಿಂದ ಎಂಬಾತನೇ ಮೃತ ವ್ಯಕ್ತಿ. ಈ ರೌಡಿಶೀಟರ್ ಸ್ಥಳೀಯ ಫುಟ್ಬಾಲ್ ತಂಡವೊಂದನ್ನು ನಿರ್ವಹಿಸುತ್ತಿದ್ದು, ಕೆಎಸ್ಎಫ್ಎ ಫುಟ್ಬಾಲ್ ಕ್ರೀಡಾಂಗಣದ ಎದುರಿನ ಬಿಬಿಎಂಪಿ ಆಟದ ಮೈದಾನದಲ್ಲಿ, ಎರಡೂ ಕಡೆ ೬ ಮಂದಿ ಸೇರಿ ಆಡುವಂತಹ ಫುಟ್ಬಾಲ್ ಟೂರ್ನಿಯೊಂದರಲ್ಲಿ ಆಟವಾಡಲು ಅಲ್ಲಿಗೆ ಆಗಮಿಸಿದ್ದ.

ಇದೇ ವೇಳೆ, ಮಧ್ಯಾಹ್ನ ೪ ರಿಂದ ೫ ಗಂಟೆ ಸುಮಾರಿಗೆ ೪ ರಿಂದ ೫ ಮಂದಿ ಆಗುಂತಕರು ಆತನನ್ನು ಸುತ್ತುವರೆದು ದಾಳಿ ನಡೆಸಿದ್ದಾರೆ. ಆತ ಅಲ್ಲಿಂದ ತಪ್ಪಿಸಿಕೊಂಡು ಕೆಎಸ್ಎಫ್ಎ ಫುಟ್ಬಾಲ್ ಕ್ರೀಡಾಂಗಣದೊಳಕ್ಕೆ ಓಡಿ ರೆಫ್ರಿ ಕೊಠಡಿಯೊಳಗೆ ಹೊಕ್ಕು ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ಆಗ ದಾಳಿ ನಡೆಸಿದ ವ್ಯಕ್ತಿಗಳು ಬಾಗಿಲನ್ನು ಮುರಿದು ಒಳಗೆ ನುಗ್ಗಿ ಮಾರಕಾಸ್ತ್ರಗಳನ್ನು ಬಳಸಿ ಆತನನ್ನು ಹತ್ಯೆಗೈದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು, ಆರೋಪಿಗಳನ್ನು ಹಿಡಿಯಲು ಎರಡು ತಂಡಗಳನ್ನು ರಚಿಸಿದ್ದಾರೆ.

KEY WORDS : Rowdy sheeter -of Bharthinagar- PS- has been hacked to death

ENGLISH SUMMARY :

Ashok Nagar PS murder; At around 4 PM today, a Rowdy sheeter of Bharthinagar PS has been hacked to death by 4-5 assailants .
He was managing a local football team and had come to play in a 6-a-side football tournament at a BBMP ground located opposite to the KSFA footbal stadium. At about 4pm 4 to 5 persons have surrounded him to assault him. He has then fled from the spot and entered the KSFA football stadium and went inside the referee’s room and locked himself. The accused persons have then broken the door and hacked him to death using deadly weapons.
A case of murder has been registered and 2 teams have been formed to identify and nab the accused.

website developers in mysore