ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ‘ಎತ್ತಿನಗಾಡಿ ಚಲೋ’ : ‘ಎತ್ತಿನಗಾಡಿ’ ಏರಿ ವಿಧಾನ ಸೌಧಕ್ಕೆ ಹೊರಟ ಡಿಕೆಶಿ, ಸಿದ್ಧರಾಮಯ್ಯ.

ಬೆಂಗಳೂರು,ಸೆಪ್ಟಂಬರ್,13,2021(www.justkannada.in): ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಹಲವು ವಿಚಾರಗಳನ್ನಿಟ್ಟುಕೊಂಡು  ಆಡಳಿತ ಪಕ್ಷದ ಮೇಲೆ ವಿಪಕ್ಷನಾಯಕರು ಮುಗಿಬೀಳಲು ಸಜ್ಜಾಗಿದ್ದಾರೆ. ಈ ಮಧ್ಯೆ ತೈಲ. ಗ್ಯಾಸ್, ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಎತ್ತಿನಗಾಡಿ ಚಲೋ ನಡೆಸಿದೆ.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ತಮ್ಮ ನಿವಾಸದಿಂದ ವಿಧಾನಸೌಧದವರೆಗೆ ಎತ್ತಿನಗಾಡಿ ಏರಿ ಹೋಗುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಾಶಿವನಗರ ನಿವಾಸದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಎತ್ತಿನ ಗಾಡಿ ಏರಿ ವಿಧಾಸೌಧಕ್ಕೆ ಹೊರಟರು.

ಈ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾವು ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಜನ  ಕೊರೋನಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ವೇಳೆ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಈ ಸರ್ಕಾರವನ್ನ ಕೆಳಗಿಳಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ENGLISH SUMMARY…..

Cong. protest against price hike: DKS, Siddaramaiah takes out ‘Bullock Cart’ jatha to Vidhana Soudha
Bengaluru, September 13, 2021 (www.justkannada.in): The State Assembly session is commencing today. The opposition party leaders are all set on attacking the ruling party based on several issues. In the meanwhile, the Congress party has organized a ‘Bullock Cart’ jatha to Vidhana Soudha, opposing the increase in prices of fuel and essential commodities.
KPCC leaders have expressed their opposition and ire about the constant increase in prices of all essential commodities on the State and Union Government, by traveling to the Vidhana Soudha on bullock carts from their residences in Bengaluru. KPCC President D.K. Shivakumar and leader of the opposition in the Assembly, Siddaramaiah left to Vidhana Soudha in a bullock cart from the residence of the former in Sadashivanagar today.
Speaking on the occasion, KPCC President D.K. Shivakumar informed the media persons that they are working on the behalf of the media. “Both the State and Union governments have failed in controlling the prices of essential commodities, while the people are reeling under problems, especially that has arisen due to the COVID-19 Pandemic. But the government has increased the sorrows and sufferings of the people by increasing the prices. Hence, we will continue our struggle till the government steps down,” he said.
Keywords: KPCC/ D.K. Shivakumar/ Siddaramaiah/ oppose/ price hike/ essential commodities/ Bullock Cart jatha

Key words: Congress –protests- over- price hike-DK Shivakumar-Siddaramaiah