ಹಲವು ಪ್ರಕರಣಗಳನ್ನ ಭೇದಿಸಿ ಪರಾಕ್ರಮ ತೋರಿದ್ದ ಬಂಡೀಪುರದ ‘ರಾಣಾ’ ಇನ್ನಿಲ್ಲ.

ಚಾಮರಾಜನಗರ,ಆಗಸ್ಟ್,2,2022(www.justkannada.in): 25ಕ್ಕೂ ಹೆಚ್ಚು ಪ್ರಕರಣಗಳು ಭೇದಿಸಿ ಏಳು ವರ್ಷಗಳ ಕಾಲ ಬಂಡೀಪುರದಲ್ಲಿ ದರ್ಬಾರ್ ನಡೆಸಿದ್ದ ರಾಣಾ ಎಂಬ ಹೆಸರಿನ ಶ್ವಾನ ಅನಾರೋಗ್ಯದಿಂದ ಮೃತಪಟ್ಟಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ  ಬಂಡೀಪುರದ ಸಿ.ಎಫ್.ಡಾ.ರಮೇಶ್ ಕುಮಾರ್,  ರಾಣಾ ಅನಾರೋಗ್ಯದಿಂದ ಮೇಲುಕಾಮನಹಳ್ಳಿ ಸಫಾರಿ ಕ್ಯಾಂಪಾಸ್ ನಲ್ಲಿ ಮೃತ ಪಟ್ಟಿದ್ದಾನೆ. ಹತ್ತು ವರ್ಷದ ವಯಸ್ಸಿನ ರಾಣಾ 2015ರಲ್ಲಿ ಬಂಡೀಪುರಕ್ಕೆ ಬಂದಿದ್ದು, ಕೇರಳ, ತಮಿಳುನಾಡಿನ ಮತ್ತು ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಪತ್ತೆ ಕಾರ್ಯದಲ್ಲಿ ತೊಡಗಿದ್ದನು. 25ಕ್ಕೂ ಹೆಚ್ಚು ಪ್ರಕರಣಗಳನ್ನ ರಾಣಾ ಭೇದಿಸಿದ್ದ. 11 ಗಂಟೆಗೆ ಸಕಾಲ ಸರ್ಕಾರಿ ಗೌರವಯೊಂದಿಗೆ ಅಂತ್ಯ ಸಂಸ್ಕಾರ. ನೇರವೆರಿಸಲಾಗುವುದು ಎಂದು  ತಿಳಿಸಿದರು.

ಇದುವರೆಗೆ ರಾಣಾ ಪತ್ತೆ ಹಚ್ಚಿದ ಪ್ರಕರಣಗಳನ್ನು ನೋಡಿದ್ದೇ ಆದರೆ ಆತನ ಸಾಧನೆ ಏನು ಎಂಬುದು ಗೊತ್ತಾಗಿ ಬಿಡುತ್ತದೆ. 2016 ರಲ್ಲಿ ಸಾಗವಾನಿ ಮರ ಕಳ್ಳಸಾಗಣೆ ಪತ್ತೆ, 2016ರಲ್ಲಿ ತಮಿಳುನಾಡಿನ ಗುಡಲೂರು ಬಳಿ ನರಹಂತಕ ಹುಲಿಯನ್ನು ಪತ್ತೆ ಹಚ್ಚುವಲ್ಲಿ ಸಹಕಾರ ನೀಡಿದ್ದನು. 2016ರಲ್ಲಿ ಬಂಡೀಪುರದ ಓಂಕಾರ್ ಅರಣ್ಯ ವಲಯದಲ್ಲಿ ಚಿರತೆಗೆ ವಿಷ ಹಾಕಿದವರನ್ನು ಪತ್ತೆ ಹಚ್ಚಿದ್ದನು. 2017 ರಲ್ಲಿ ಶ್ರೀರಂಗಪಟ್ಟಣದಲ್ಲಿ ಶ್ರೀಗಂಧ ಕಳ್ಳರ ಪತ್ತೆ ಹಚ್ಚಿದ್ದು. 2017 ರಲ್ಲಿ ಪ್ರಿನ್ಸ್ ಹುಲಿಯ ಕಳೇಬರ ಹುಡುಕಿ ಕೊಟ್ಟಿದ್ದನು. 2018 ರಲ್ಲಿ ನಾಗರಹೊಳೆಯ ಡಿ.ಬಿ ಕುಪ್ಪೆಯಲ್ಲಿ ಮೃತಪಟ್ಟ ಜಿಂಕೆಯನ್ನು ಪತ್ತೆ ಹಚ್ಚಿದ್ದಾನೆ. 2018 ರಲ್ಲಿ ಮೈಸೂರಿನ ಹಾರೋಹಳ್ಳಿಯ ಹುಲಿ ಸಾವು ಪ್ರಕರಣ, ನಾಗರಹೊಳೆಯ ಅಂತರಸಂತೆಯಲ್ಲಿ ದೋಣಿ ಕದ್ದವರನ್ನು ಪತ್ತೆ ಹಚ್ಚಿದ್ದು ಈತನ ಸಾಧನೆ. 2022ರಲ್ಲಿ ನಾಗರಹೊಳೆ ಹುಲಿ ಬೇಟೆ ಆಡಿದು ಮೂವರ ಆರೋಪಿಗಳು ಬಂಧನ. ಇದಿಷ್ಟು ರಾಣಾನ ಸಾಧನೆಯಾಗಿದೆ ಎಂದು  CF ಡಾ. ರಮೇಶ್ ಕುಮಾರ್ ಮಾಹಿತಿ ನೀಡಿದರು.

Key words: Bandipur- Rana-no more- CF- Dr. Ramesh Kumar – Information