ನಾಳೆ ಬಂದ್ ಹಿನ್ನೆಲೆ: ಎಚ್ಚರಿಕೆಯಿಂದಿರುವಂತೆ ವಿಭಾಗೀಯ ಅಧಿಕಾರಿಗಳಿಗೆ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ಸೂಚನೆ…

Promotion

ಬೆಂಗಳೂರು,ಫೆ,12,2020(www.justkannada.in): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ವಿವಿಧ ಸಂಘಟನೆಗಳು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಬಂದ್ ವೇಳೆ ಎಚ್ಚರಿಕೆಯಿಂದ ಇರುವಂತೆ ವಿಭಾಗೀಯ ಅಧಿಕಾರಿಗಳಿಗೆ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್ ಸೂಚನೆ ನೀಡಿದ್ದಾರೆ.

ನಾಳೆ ಬಂದ್ ಹಿನ್ನೆಲೆ ಈ ಬಗ್ಗೆ ಕೆಎಸ್ ಆರ್ ಟಿಸಿ ವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಿರುವ ಕೆಎಸ್ ಆರ್ ಟಿಸಿ ಎಂಡಿ ಶಿವಯೋಗಿ ಕಳಸದ್, ಬಂದ್ ವೇಳೆ ವಾಹನಗಳನ್ನ ಜಖಂಗೊಳಿಸುವ ಸಾಧ್ಯತೆ ಇದೆ.  ಕಾರ್ಮಿಕರಿಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಹೀಗಾಗಿ ವಾಹನ ಮತ್ತು ಸಿಬ್ಬಂದಿಗಳ ಸುರಕ್ಷತೆ ವಹಿಸಿ ಎಂದು ತಿಳಿಸಿದ್ದಾರೆ.

ಹಾಗೆಯೇ ಬಂದ್ ವೇಳೆ ವಾಹನ ಜಖಂಮಾಡಿದರೇ ದೂರು ನೀಡಿ ಆದಾಯ ನಷ್ಟದ ಬಗ್ಗೆ ವರದಿ ಕೊಡಿ ಜತೆಗೆ ಪೊಲೀಸರ ವ್ಯವಸ್ಥೆ ಮಾಡಿಕೊಳ್ಳಿ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ.

Key words: bandh-ksrtc –md-shivayogi kalasad-instruct