ಎಸ್ ಡಿಪಿಐ ಮತ್ತು ಪಿಎಫ್ ಐ ನಿಷೇಧಕ್ಕೆ ಚಿಂತನೆ ವಿಚಾರ: ಅಡ್ಡಗೋಡೆ ಮೇಲೆ‌ ದೀಪ ಇಟ್ಟ ಶಾಸಕ ತನ್ವೀರ್ ಸೇಠ್…

ಮೈಸೂರು,ಆ,15,2020(www.justkannada.in):  ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ನಂತರ ಎಸ್.ಡಿಪಿಐ ಮತ್ತು ಪಿಎಫ್ಐ  ಸಂಘಟನೆಗಳ ನಿಷೇಧಕ್ಕೆ ಆಗ್ರಹ ಕೇಳಿ ಬರುತ್ತಿದೆ. ಈ ನಡುವೆ ಈ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಗಲಭೆ ಆಗಿರೋದು ನಿಜ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವುದು ಸರ್ಕಾರದ ಜವಾಬ್ದಾರಿ. ಅದನ್ನ ಬಿಟ್ಟು ಎಲ್ಲದರಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ತನ್ವೀರ್ ಸೇಠ್, ರಾಜ್ಯ ಮತ್ತು ಕೇಂದ್ರ ಎರಡರಲ್ಲೂ ನಿಮ್ಮದೇ ಸರ್ಕಾರ ಇದೆ. ಹೀಗಾಗಿ ಎಸ್ ಡಿಪಿಐ ನಿಷೇಧಿಸಬೇಕು ಎನ್ನುವುದಾದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಿ. ಸುಮ್ಮನೆ ಮಾತಾಡುವುದರಿಂದ ಏನು ಪ್ರಯೋಜನ ಇಲ್ಲ. ಆದರೆ ಎಸ್ ಡಿಪಿಐ ಒಂದು ರಾಜಕೀಯ ಪಕ್ಷ. ನನಗೂ ಅದು ವಿರೋಧ ಪಕ್ಷ. ತತ್ವ ಸಿದ್ದಾಂತಗಳ ಆಧಾರದ ಮೇಲೆ‌ ಅವರವರು ರಾಜಕೀಯ ಮಾಡ್ತಾರೆ. ಆದ್ರೆ ಅದನ್ನೆ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ತಿಳಿಸಿದರು.

ನನ್ನ ಮೇಲೆ ನಡೆದಿರುವ ಹಲ್ಲೆ ವಿಚಾರಕ್ಕೆ ರಾಜಕೀಯ ತಳುಕು…

ತಮ್ಮ ಮೇಲೆ ನಡೆದ ಹಲ್ಲೆ ವಿಚಾರ ಪ್ರಸ್ತಾಪಿಸಿರುವ ಕುರಿತು ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್,  ನನ್ನ ಮೇಲೆ ನಡೆದಿರುವ ಹಲ್ಲೆ ವಿಚಾರವನ್ನು ರಾಜಕೀಯಕ್ಕೆ ತಳುಕು ಹಾಕಿದ್ದಾರೆ. ಕೆಜೆ ಹಳ್ಳಿ ಗಲಭೆ ವಿಚಾರದ ನಂತರ ನನ್ನ ಮೇಲಿನ ಹಲ್ಲೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ನನ್ನ ಮೇಲಿನ ಹಲ್ಲೆಗೂ ಎಸ್ ಡಿಪಿಐಗೂ ಸಂಬಂಧ ಇದೆಯಾ…? ಎಂಬುದೇ ಖಚಿತವಾಗಿಲ್ಲ. ಇನ್ನು ಪೊಲೀಸರು ನನ್ನ ಮೇಲಿನ ಹಲ್ಲೆ ಬಗ್ಗೆ  ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ 8 ಜನರನ್ನು ದಸ್ತಗಿರಿ ಮಾಡಿದ್ದರು, ಐವರು ಇದೀಗ ಬೇಲ್ ಮೇಲೆ ಹೊರಬಂದಿದ್ದಾರೆ. ಇನ್ನುಳಿದ ಮೂವರು ಜೈಲಿನಲ್ಲಿದ್ದಾರೆ. ನಾನು ಲಾಯರ್ ಇಟ್ಟು ಪ್ರಕರಣ‌ ಮುಂದುವರೆಸುತಿದ್ದೇನೆ. ತನಿಖೆಯ ಸತ್ಯಾಂಶ ಹೊರಬರುವವರೆಗೂ ಏನೇನೋ ಮಾತಾಡಬಾರದು ಎಂದು ತನ್ವೀರ್ ಸೇಠ್ ತಿಳಿಸಿದರು.ban-sdpi-pfi-mysore-mla-tanveer-sait

ಪಕ್ಷದ ಸಿದ್ದಾಂತಗಳು ಬೇರೆ ಬೇರೆ ಆಗಿರಬಹುದು. ಆದರೆ ಮನ್ನುಷ್ಯತ್ವ’ ದೇಶ’ ಭದ್ರತೆ ವಿಚಾರದಲ್ಲಿ ಎಲ್ಲರು ಒಂದಾಗಬೇಕು. ಡಿಜೆ ಹಳ್ಳಿ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಈ ಪ್ರಕರಣ ನ್ಯಾಯಯುತವಾಗಿ ತಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದನ್ನೇ ನಾನು ಸೇರಿದಂತೆ ಪ್ರತಿಯೊಬ್ಬರು ಹೇಳುತ್ತಿದ್ದಾರೆ. ನಾನೂ ಸಹ ಎಲ್ಲರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

Key words: ban- SDPI – PFI-mysore- MLA-Tanveer Sait