ಬ್ಯಾನ್ ಮಾಡೋದಾದ್ರೆ ಆರ್ ಎಸ್ ಎಸ್, ಬಜರಂಗ ದಳ ಬ್ಯಾನ್ ಮಾಡಿ- ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ…

Promotion

ಬೆಂಗಳೂರು,ಜ,21,2020(www.justkannada.in):  ಎಸ್ ಡಿ.ಪಿ.ಐ ಮತ್ತು ಪಿಎಫ್ ಐ ಸಂಘಟನೆಗಳ ನಿಷೇಧಕ್ಕೆ ಒತ್ತಾಯ ಕೇಳಿ ಬರುತ್ತಿರುವ ಹಿನ್ನೆಲೆ, ಈ ಬಗ್ಗೆ ಕಿಡಿಕಾರಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಬ್ಯಾನ್ ಮಾಡೋದಾದ್ರೆ ಆರ್ ಎಸ್ ಎಸ್, ಬಜರಂಗ ದಳ ಬ್ಯಾನ್ ಮಾಡಿ ಎಂದು ಹೇಳಿದ್ದಾರೆ.

ಈ ಕುರಿತು ಟೌನ್ ಹಾಲ್ ಮುಂದೆ ಸಿಎಎ ಪರ ರ್ಯಾಲಿ ವೇಳೆ ಸಂಸದ ತೇಜಶ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸ್ಕೇಚ್ ಹಾಕಲಾಗಿತ್ತು ಎಂಬ ಸುದ್ದಿಯಾಗಿತ್ತು. ಈ ಸಂಬಂಧ 6 ಮಂದಿ ಆರೋಪಿಗಳನ್ನ ಬಂಧಿಸಿದ ಪೊಲೀಸರು ಬಂಧಿತರು ಎಸ್ ಡಿಪಿಐ ಕಾರ್ಯಕರ್ತರಾಗಿದ್ದಾರೆ ಎನ್ನಲಾಗಿದೆ.  ಹೀಗಾಗಿ ಎಸ್ ಡಿಪಿಐ ಸಂಘಟನೆ ಬ್ಯಾನ್ ಮಾಡುವಂತೆ ಹಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್ ಖಾನ್, ಎಸ್ ಡಿಪಿಐ ತಪ್ಪು ಮಾಡಿರುವ ಬಗ್ಗೆ ಸಾಕ್ಷಿ ಇದೆಯಾ.  ಎಸ್ ಡಿಪಿಐ ಸಂಘಟನೆಯ ಪಕ್ಷ ಇದೆ. ಅದು ಪಕ್ಷದ ಚಟುವಟಿಕೆಯನ್ನ ಮಾಡಿಕೊಂಡು ಹೋಗುತ್ತಿದೆ. ಆದರೆ ಆರ್ ಎಸ್ ಎಸ್, ಬಜರಂಗದಳ  ಕೋಮುವಾದಿ ಚಟುವಟಿಕೆ ಮಾಡ್ತಿದ್ದಾರೆ. ಹೀಗಾಗಿ  ಮಾಡುವುದಾದರೇ ಆರ್ ಎಸ್ ಬಜರಂಗದಳ ಬ್ಯಾನ್ ಮಾಡಿ. ತಪ್ಪು ಮಾಡಿದ್ದವರಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಹೇಳಿಕೆ ನೀಡಿದ್ದಾರೆ.

Key words: Ban –RSS-Bajrang Dal-Former Minister -Zamir Ahmed Khan