ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿರುವ ವಿಚಾರ:  ಡಿ.ಕೆ. ಶಿವಕುಮಾರ್ ಗೆ ಸಚಿವ ಬಿ.ಸಿ ಪಾಟೀಲ್ ಟಾಂಗ್.

Promotion

ಹಾವೇರಿ,ಜುಲೈ5,2021(www.justkannada.in): ಪಕ್ಷ ಬಿಟ್ಟವರೂ ಕಾಂಗ್ರೆಸ್ ಗೆ ಬರಲು ಅರ್ಜಿ ಹಾಕಬಹುದು ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಹ್ವಾನಕ್ಕೆ ಟಾಂಗ್ ನೀಡಿರುವ ಕೃಷಿ ಸಚಿವ ಬಿ.ಸಿ ಪಾಟೀಲ್, ಕಾಂಗ್ರೆಸ್ ಔಟ್ ಆಫ್ ಸೈಟ್. ಜನ ಅವರನ್ನ ಮರೆತೇ ಬಿಟ್ಟಿದ್ದಾರೆ. ಕಾಂಗ್ರೆಸ್ ಅರ್ಜಿ ಪಡೆಯುವವರು ಯಾರೂ ಇಲ್ಲ. ಹಾಗಾಗಿ ಹೋಲ್ ಸೇಲ್ ಆಗಿ ಆಹ್ವಾನಿಸಿದ್ದಾರೆ ಎಂದು ಲೇವಡಿ ಮಾಡಿದರು.jk

ಹಾವೇರಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ನಾವು ಯಾರೂ ಕಾಂಗ್ರೆಸ್ ಗೆ ಮತ್ತೆ ಹೋಗುವುದಿಲ್ಲ. ಡಿ.ಕೆ. ಶಿವಕುಮಾರ್ ಕನಸು ಕಾಣುತ್ತಿದ್ದಾರೆ ಅವರ ಕನಸು ಯಾವತ್ತೂ ನನಸಾಗಲ್ಲ ಎಂದು  ಹೇಳಿದರು.

ನಾಯಕತ್ವ ಬದಲಾವಣೆ ವಿಚಾರವಾಗಿ ಸಚಿವ ಸಿ.ಪಿ. ಯೋಗೇಶ್ವರ್ ಬಹಿರಂಗ ಹೇಳಿಕೆ  ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ್, ಇಂತಹ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂಬುದು ಗೊತ್ತು. ಅಂಬಾರಿ ಹೊರಲು ಶಕ್ತಿಯಿದೆ ಎಂದೇ ಜನ ಆಯ್ಕೆ ಮಾಡಿರುವುದು. ಅಪ್ಪನಿಗೆ ಅಂಬಾರಿ ಹೊರಲು ಶಕ್ತಿಯಿದ್ದರೆ ಅಪ್ಪ ಹೊರುತ್ತಾನೆ. ಮಗನಿಗೆ ಶಕ್ತಿಯಿದ್ದರೆ ಮಗ ಹೊರುತ್ತಾನೆ. ಇದರಲ್ಲಿ ತಪ್ಪೇನಿದೆ. ಈ ಬಗ್ಗೆ ಪದೇ ಪದೇ ಮಾತನಾಡುವುದಿಲ್ಲ ಎಂದು  ಹೇಳಿದರು.

Key words: Back – Congress –party-dk Shivakumar – Minister- BC Patil