#ಅಯೋಧ್ಯಾ_ತೀರ್ಪು: ಶಿಯಾ ವಕ್ಫ್​ ಮಂಡಳಿ ಸಲ್ಲಿಸಿದ್ದ ಎಸ್​ಎಲ್​​ಪಿ ವಜಾ

Promotion

ನವದೆಹಲಿ, ನವೆಂಬರ್ 09, 2019 (www.justkannada.in): ಅಯೋಧ್ಯಾ ತೀರ್ಪುನ್ನು ನ್ಯಾಯಮೂರ್ತಿಗಳು ಓದುತ್ತಿದ್ದು, ಸಾಕಷ್ಟು ವಿವರಗಳನ್ನು ನೀಡುತ್ತಿದ್ದಾರೆ.

ಶಿಯಾ ವಕ್ಫ್​ ಮಂಡಳಿ ಸಲ್ಲಿಸಿದ್ದ ಎಸ್​ಎಲ್​​ಪಿ ವಜಾ ಮಾಡಿ ನ್ಯಾಯಮೂರ್ತಿಗಳು ಆದೇಶ ಹೊರಡಿಸಿದ್ದಾರೆ. ಇಲ್ಲಿದೆ ತೀರ್ಪಿನ ಟೈಮ್ ಲೈನ್….

10.50: 12ನೇ ಶತಮಾನದಲ್ಲಿ ಇಲ್ಲಿ ದೇಗುಲ ಇತ್ತು ಎಂಬುದು ಉತ್ಖನನದ ವೇಳೆ ಸ್ಪಷ್ಟವಾಗಿದೆ. ಮಸೀದಿಯ ಅಡಿಪಾಯದ ಕೆಳಗೆ ಇರುವ ರಚನೆ ಇಸ್ಲಾಮಿಕ್​ಗೆ ಸಂಬಂಧಪಟ್ಟದ್ದು ಆಗಿರಲಿಲ್ಲ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ಮುಖ್ಯನ್ಯಾಯಮೂರ್ತಿ.

10.46: ರಾಮಮಂದಿರ ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಲಾಗಿತ್ತು ಎಂದು ವರದಿ ನೀಡಿದ್ದ ಪುರಾತತ್ವ ಇಲಾಖೆಯೆ ವಾದಕ್ಕೆ ಮನ್ನಣೆ ನೀಡಿದ ಸುಪ್ರೀಂಕೋರ್ಟ್​.

10.43: ನಿರ್ಮೋಹಿ ಆಖಾಡದ ಅರ್ಜಿ ವಜಾ, ರಮಲಲ್ಲಾ ಅರ್ಜಿ ಮಾನ್ಯ ಮಾಡಿದ ಸುಪ್ರೀಂಕೋರ್ಟ್​

10. 41: ರಂಜನ್​ ಗೊಗೊಯ್​: ಮಸೀದಿಯನ್ನು ಮೊಘಲ್​ ದಂಡನಾಯಕ ಮೀರ್​ ಬಾಕಿ ಕಟ್ಟಿದ್ದಾನೆಂದು ವಾದಿಸಲಾಗಿತ್ತು. ಹೀಗಾಗಿ ಅದು ಧಾರ್ಮಿಕ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ.

10. 35: 1946 ರ ಫೈಜಾಬಾದ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಶಿಯಾ ವಕ್ಫ್ ಮಂಡಳಿ ಸಲ್ಲಿಸಿದ್ದ ಎಸ್‌ಎಲ್‌ಪಿ(ಸಿಂಗಲ್ ಲೀವ್​ ಪಿಟಿಷನ್​)ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್​