Monday, September 14, 2026

BDA Apartments

ಮೈಸೂರಿನಲ್ಲಿ ಭದ್ರತೆಗಾಗಿ 3,500 ಪೊಲೀಸರ ನಿಯೋಜನೆ BDA JK_Adv BDA Adv
Home Front Page ಮೈಸೂರಿನಲ್ಲಿ ಭದ್ರತೆಗಾಗಿ 3,500 ಪೊಲೀಸರ ನಿಯೋಜನೆ

ಮೈಸೂರಿನಲ್ಲಿ ಭದ್ರತೆಗಾಗಿ 3,500 ಪೊಲೀಸರ ನಿಯೋಜನೆ

ಮೈಸೂರು, ನವೆಂಬರ್ 09, 2019 (www.justkannada.in): ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಭದ್ರತೆಗಾಗಿ 3,500ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.

ನಗರದೆಲ್ಲೆಡೆ ಪೊಲೀಸರ ಕಟ್ಟೆಚ್ಚರ. ಎಲ್ಲಾ ದೇವಸ್ಥಾನಗಳು, ಮಸೀದಿಗಳು, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪೂಜಾ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದು, ವಿಜಯೋತ್ಸವ ಹಾಗೂ ಪ್ರತಿಭಟನೆ ನಿಷೇಧ ಮಾಡಲಾಗಿದೆ.

ಶುಕ್ರವಾರ ರಾತ್ರಿಯಿಂದಲೇ ಲಾಡ್ಜ್‌ಗಳು, ಹೋಟೆಲ್‌ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. 12 ಜಾಗಗಳಲ್ಲಿ ಚೆಕ್‌ಪೋಸ್ಟ್‌, 4 ಕೆ.ಎಸ್‌.ಆರ್‌.ಪಿ ತುಕಡಿಗಳು, 18 ಸಿಎಆರ್ ತುಕಡಿಗಳು ಹಾಗೂ ಅಶ್ವಾರೋಹಿದಳ ಸನ್ನದ್ಧವಾಗಿದೆ.

18 ಭಯೋತ್ಪಾದನಾ ನಿಗ್ರಹದ ಪ್ರತ್ಯೇಕ ತಂಡ ಕಾರ್ಯ ಸನ್ನದ್ಧವಾಗಿದ್ದು, ಈದ್‌ ಮಿಲಾದ್ ಆಚರಣೆ ಹೊರತುಪಡಿಸಿ ಉಳಿದ ಯಾವುದೇ ವಿಧವಾದ ಮೆರವಣಿಗೆ ನಡೆಸುವುದು ನಿಷೇಧ ಮಾಡಲಾಗಿದೆ. ಮೈಸೂರು ಜಲ್ಲಾ ಪೊಲೀಸರ ಎಲ್ಲ ರಜೆ ರದ್ದು ಮಾಡಲಾಗಿದೆ.