ಸರಣಿ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಸಾವು 

Promotion

ಬೆಂಗಳೂರು,ಜೂನ್,13,2022(www.justkannada.in):  ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಸರಣಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ಧ ಆಟೋ ಚಾಲಕ ಮೃತಪಟ್ಟಿದ್ದಾರೆ.

ಇಂದು ಮುಂಜಾನೆ ಮೈಸೂರು ರಸ್ತೆಯ ಸ್ಯಾಟ್‍ಲೈಟ್ ನಿಲ್ದಾಣದ ಬಳಿ ಕ್ಯಾಂಟರ್, ಟೆಂಪೋ, ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿತ್ತು ಈ ಅಪಘಾತದಲ್ಲಿ ಬಿಎಂಟಿಸಿ ಹಾಗೂ ಟೆಂಪೋ ನಡುವೆ ಆಟೋ ಸಿಲುಕಿದೆ. ಸರಣಿ ಅಪಘಾತದಲ್ಲಿ ಸಿಲುಕಿದ ಆಟೋ ಸಂಪೂರ್ಣ ಜಖಂ ಆಗಿದ್ದು, ಆಟೋಚಾಲಕ ಗಿರಿ ಸಾಗರ್(44) ಗಂಭೀರ ಗಾಯಗೊಂಡಿದ್ದರು.tractor-collision-bike-bike-rider-dies-on-the-spot-mysore

ಗಿರಿ ಸಾಗರ್ ಅವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು ಆದರೆ ಚಿಕಿತ್ಸೆ ಫಲಿಸದೆ ಗಿರಿ ಸಾಗರ್ ಮೃತಪಟ್ಟಿದ್ದಾರೆ. ನಡುರಸ್ತೆಯಲ್ಲಿ ಅಪಘಾತ ಆಗಿದ್ದು, ಮೈಸೂರು ರೋಡ್ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Key words: Auto driver –death- accident-bangalore