ಇಡಿ ಕಡೆ ಹೋಗುತ್ತಿರುವ ಪಾದಯಾತ್ರೆ ಮುಂದಿನ ದಿನಗಳಲ್ಲಿ ತಿಹಾರ್ ಜೈಲಿನತ್ತ- ‘ಕೈ’ ಪ್ರತಿಭಟನೆಗೆ ಸಚಿವ ಅಶ್ವಥ್ ನಾರಾಯಣ್ ವ್ಯಂಗ್ಯ.

ಬೆಂಗಳೂರು,ಜೂನ್,13,2022(www.justkannada.in): ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಇಡಿ ಸಮನ್ಸ್ ನೀಡಿರುವುದನ್ನ ವಿರೋಧಿಸಿ ಕಾಂಗ್ರೆಸ್ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸುತ್ತಿದ್ದು ಈ ಕುರಿತು ಸಚಿವ ಅಶ್ವಥ್ ನಾರಾಯಣ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಅಶ್ವಥ್ ನಾರಾಯಣ್,  ಇಡಿ ಕಡೆಗೆ ಹೋಗುತ್ತಿರುವ ಪಾದಯಾತ್ರೆ ಮುಂದಿನ ದಿನಗಳಲ್ಲಿ ತಿಹಾರ್ ಜೈಲಿನ ಕಡೆಗೆ ಹೋಗುತ್ತೆ. ಇವರ ಎಲ್ಲಾ ಚೇಲಾಗಳು ಚಮಚಾಗಳು ಜೈಲಿಗೆ ಹೋಗಬೇಕಾಗುತ್ತೆ ಎಂದು ಲೇವಡಿ ಮಾಡಿದ್ದಾರೆ.

ಅಧಿಕಾರ ಇದ್ದಾಗ ದುರ್ಬಳಕೆ ಮಾಡಿಕೊಂಡರು ಅಧಿಕಾರ ಇಲ್ಲದಿದ್ದಾಗ ಆಪಾದನೆ ಮಾಡುತ್ತಿದ್ದಾರೆ. ಇಡಿ ವಿರುದ್ದ ಪ್ರತಿಭಟನೆ ಮಾಡೋದು ತಪ್ಪು. ಅವರ ಪಾದಯಾತ್ರೆ ಬೆದರಿಕೆಗೆ ಹೆದರಲ್ಲ ಇಡಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ  ಡಿಕೆಶಿಗೂ ಗೊತ್ತು. ಇಡಿ ವಿಚಾರಣೆ ಎದುರಿಸಿ ಬಂದವರು ಎಂದು ಟಾಂಗ್ ನೀಡಿದರು.

Key words: congress-protest-ED- Minister -Ashwath Narayan