ಆಡಿಯೋ ವೈರಲ್ ಬೆನ್ನಲ್ಲೆ ನಳೀನ್ ಕುಮಾರ್ ಕಟೀಲ್ ದೆಹಲಿ ಪ್ರವಾಸ ರದ್ಧು.

Promotion

ಮಂಗಳೂರು. ಜುಲೈ.19.( www.justkannad.in) ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರದ್ಧು ಎನ್ನಲ್ಲಾದ ಆಡಿಯೋ ವೈರಲ್ ಆಗಿದ್ದು  ಈ ಬೆನ್ನಲ್ಲೆ ನಳೀನ್ ಕುಮಾರ್ ಕಟೀಲ್ ತಮ್ಮ ದೆಹಲಿ ಪ್ರವಾಸ ರದ್ಧು ಮಾಡಿದ್ದಾರೆ.jk

ಇಂದಿನಿಂದ ದೆಹಲಿಯ ಸಂಸತ್ ಭವನದಲ್ಲಿ  ಮಳೆಗಾಲದ ಅಧಿವೇಶನ ಶುರುವಾಗಿದ್ದು, ಸಂಸತ್ ಕಲಾಪಕ್ಕೆ ಈ ಮೂಲಕ ನಳಿನ್ ಕುಮಾರ್ ಕಟೀಲ್ ಅವರು ಗೈರು ಹಾಜರಾಗಿದ್ದಾರೆ.

ಬಿ.ಜೆ.ಪಿ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿರುವ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಅಡಿಯೋ ಬೆನ್ನಲ್ಲೆ ಇಂದು ದೆಹಲಿ ಪ್ರವಾಸವನ್ನು ರದ್ದುಗೊಳಸಿ ಮಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಸದ್ಯ ನಳೀನ್ ಕುಮಾರ್ ಕಟೀಲ್ ಇಂದು ಮಂಗಳೂರಿನಲ್ಲಿಯೇ ಇದ್ದು ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ. ನಂತರ ನಾಳೆ ಬೆಳಿಗ್ಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಆಡಿಯೋ ವೈರಲ್ ಬಗ್ಗೆ ಮಾಧ್ಯಮದ ಜೂತೆ ಮಾತನಾಡಿರುವ ನಳಿನ್ ಕುಮಾರ್ ಕಟೀಲ್,  ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ, ಆಡಿಯೋಗು ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಈ ಆಡಿಯೋ ನಿಜವಾಗಿಯೂ ನಕಲಿ ಇರಬೇಕು. ಹಾಗೂ ಆಡಿಯೋ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ ಎಂದರು.

Key words: Audio- viral –BJP-president-Nalin Kumar Kateel –cancels- Delhi tour.