ದಲಿತ ಯುವಕ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಪ್ರಕರಣ: ಸಿಎಂ, ಶಾಸಕ ಮತ್ತು ಸಂಸದರ ವಿರುದ್ದ ಮೈಸೂರಿನಲ್ಲಿ ಪ್ರೋ. ಮಹೇಶ್ ಚಂದ್ರ ಗುರು ಆಕ್ರೋಶ…

ಮೈಸೂರು,ಜೂ,12,2019(www.justkannada.in):  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ವೀರಾಪುರ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿರುವ ದಲಿತ ಯುವಕನ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಪ್ರಕರಣವನ್ನ ಖಂಡಿಸಿರುವ ಪ್ರೋ. ಮಹೇಶ್ ಚಂದ್ರಗುರು ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಚಾಮರಾಜನಗರ ಸಂಸದರು  ಮತ್ತು ಗುಂಡ್ಲುಪೇಟೆ ಶಾಸಕರ ಮೇಲೆ ಕಿಡಿಕಾರಿದ್ದಾರೆ.

ಈ ಪ್ರಕರಣ ಅತ್ಯಂತ ದೊಡ್ಡ ದಲಿತ ವಿರೋಧಿ ದೌರ್ಜನ್ಯ. ಗುಂಡ್ಲುಪೇಟೆ ಶಾಸಕ ಚಾಮರಾಜನಗರ ಸಂಸದರು ಅಧಿಕಾರದಲ್ಲಿ ಇರುವ ಹಕ್ಕಿಲ್ಲ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಹಾಗೆಯೇ ಇಂತಹ ಪ್ರಕರಣ ಬಗ್ಗೆ ಟ್ವಿಟರ್ ನಲ್ಲಿ ಸಂತಾಪ ಸೂಚಿಸುವ ಸಿಎಂ ನಮಗೆ ಬೇಡ.  ಗ್ರಾಮ ವಾಸ್ತವ್ಯ ಮಾಡುವಂತಹ ಸಿಎಂ ನಮಗೆ ಬೇಡ. ದಲಿತರ ಮೇಲೆ, ಕಾರ್ಮಿಕರ ಮೇಲೆ ಬಡವರ ಮೇಲೆ ನಡೆಯುವಂತ ಸಿಎಂ ನಮಗೆ ಬೇಕು  ಎಂದು ಪ್ರೊ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಯುವಕ ಮೇಲೆ ಹಲ್ಲೆ ಪ್ರಕರಣ ‌ಖಂಡಿಸಿ ಮೈಸೂರಿನಲ್ಲಿ  ದಲಿತ ಸಂಘಟನೆಗಳು ಬೀದಿಗಿಳಿದಿವೆ. ಮೈಸೂರಿನ ಟೌನ್ ಹಾಲ್ ಬಳಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪ್ರೊ.ಮಹೇಶ್ ಚಂದ್ರಗುರು ಸೇರಿ ಹಲವರು ಭಾಗಿಯಾಗಿದ್ದರು.

ಪ್ರತಿಭಟನೆ ವೇಳೆ ಮಾತನಾಡಿದ ಪ್ರೋ. ಮಹೇಶ್ ಚಂದ್ರ ಗುರು, ಈ ಪ್ರಕರಣ ಅತ್ಯಂತ ದೊಡ್ಡ ದಲಿತ ವಿರೋದಿ ದೌರ್ಜನ್ಯ. ಗುಂಡ್ಲುಪೇಟೆ ಪೋಲಿಸ್ ಇಲಾಖೆ, ಮತ್ತು ಸರ್ಕಾರಿ ಅಧಿಕಾರಿಗಳು ಮೇಲ್ಜಾತಿಯ ಪ್ರಭುತ್ವದ ಜೊತೆ ಶಾಮೀಲಾಗಿಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ವಿಧಿ ವಿಧಾನಗಳ ಮೂಲಕ ಪ್ರಕರಣ ದಾಖಲು ಮಾಡಿಲ್ಲ. ಸ್ಥಳೀಯ ಶಾಸಕ ನಿರಂಜನ್ ಕುಮಾರ್ ಅವರು ಕುಮ್ಮಕ್ಕಿನಿಂದ ಪ್ರಕರಣ ಮುಚ್ವಿ ಹಾಕುವ ಪ್ರಯತ್ನ ನಡೆಯುತ್ತಿದೆ. ದಲಿತರ ಮಹಾನಾಯಕ ಎಂದು ಬಿಂಬಿಕೊಂಡು  ಅವರ ಬಳಿ ಮತ ಕೇಳಲು ಹೋಗ್ತಾರೆ. ಆದ್ರೇ ಇಂದು ದಲಿತ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು.

ಇಂತಹ ಘಟನೆ ನಡೆದಿದ್ರೂ ಇನ್ನು ಅದರ ಬಗ್ಗೆ ಮಾತನಾಡದಿರುವುದು ನಾಚಿಕೆ ಗೆಡು. ನಮಗೆ ಇಂತಹ ಶಾಸಕರು ಸಂಸದರು ಅವಶ್ಯಕತೆ ಇಲ್ಲ. ಗೃಹ ಮಂತ್ರಿ ಎಂ.ಬಿ.ಪಾಟೀಲ್ ಈ ಬಗ್ಗೆ ಇನ್ನೂ ಏನು ಮಾತನಾಡಿಲ್ಲ. ಈ ಮೂಲಕ ಕರ್ನಾಟಕ ಇನ್ನೋಂದು ಯು.ಪಿ ಹಾಗುವಂತಹ ಕೆಟ್ಟ ದಾರಿಯಲ್ಲಿ ಸಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ವೇಳ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಮಹೇಶ್ ಚಂದ್ರಗುರು, ಗ್ರಾಮ ವಾಸ್ತವ್ಯ ಮಾಡುವಂತಹ ಸಿಎಂ ನಮಗೆ ಬೇಡ.  ದಲಿತರ ಮೇಲೆ, ಕಾರ್ಮಿಕರ ಮೇಲೆ ಬಡವರ ಮೇಲೆ ನಡೆಯುವಂತ ಸಿಎಂ ನಮಗೆ ಬೇಕು. ಅವರ ಕಣ್ಣಿರು ಒರೆಸುವ ಮುಖ್ಯಮಂತ್ರಿ ನಮಗೆ ಬೇಕು. ಆದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಇವರು ವರ್ಗದ ಪ್ರತಿ ನಿಧಿಗಳೆ ಹೊರತು ಶೋಷಿತರ ಪ್ರತಿನಿಧಿಗಳಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ  ದಲಿತ ಸಂಘರ್ಷ ಸಮಿತಿಯ ಚೋರನ ಹಳ್ಳಿ ಶಿವಣ್ಣ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಪ್ರಕರಣಗಳು ಹೆಚ್ಚಾಗಿದೆ. ಶಾಂತಿಯುತವಾಗಿದ್ದ ಕರ್ನಾಟಕ ಈಗ ಉತ್ತರ ಪ್ರದೇಶ ಹಾಗೂ ಬಿಹಾರದ ರೀತಿ ಬದಲಾಗುತ್ತಿದೆ.ಈ ರೀತಿಯ ಅಮಾನವೀಯ ಘಟನೆ ನಡೆದರು ಚಾಮರಾಜನಗರ ಜಿಲ್ಲಾಡಳಿತ ಕಣ್ಣು ಮುಚ್ಚಿ ಕೂತಿದೆ. ಗುಂಡ್ಲುಪೇಟೆ ಪೋಲಿಸರು ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

key words: assult on Dalit youth: Mahesh Chandra Guru Outrage against to MLA and MP

#Chamarajanagar #assult # Dalityouth #MaheshChandraGuru #Outrage