ವಿಧಾನಸಭೆಯಲ್ಲಿ ಹೆಚ್. ವಿಶ್ವನಾಥ್ ಅವರ ಸಾಲದ ಬಗ್ಗೆ ಪ್ರಸ್ತಾಪ ವಿಚಾರ: ಸಾ.ರಾ ಮಹೇಶ್ ಕ್ಷಮೆಯಾಚಿಸುವಂತೆ ರೇವಣ್ಣ ಆಗ್ರಹ…

Promotion

ಮೈಸೂರು,ಜು,24,2019(www.justkannada.in): ವಿಧಾನಸಭೆಯಲ್ಲಿ ಹೆಚ್. ವಿಶ್ವನಾಥ್ ಅವರ ಸಾಲದ ಬಗ್ಗೆ ಪ್ರಸ್ತಾಪಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಾ.ರಾ ಮಹೇಶ್ ಬಹಿರಂಗ ಕ್ಷಮೆಯಾಚಿಸುವಂತೆ  ಜೆಡಿಎಸ್ ನಗರ ಕಾರ್ಯದರ್ಶಿ ರೇವಣ್ಣ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜೆಡಿಎಸ್ ನಗರ ಕಾರ್ಯದರ್ಶಿ ರೇವಣ್ಣ, ಸಾರಾ ಮಹೇಶ್ ಮಂತ್ರಿಯಾಗುವುದಕ್ಕೆ ನಾಲಾಯಕ್. ಅವರ ಭಾಷೆಗಳನ್ನ ಗಮನಿಸಿದರೆ ಅವರು ಒಬ್ಬ ಮಾರುಕಟ್ಟೆ ವ್ಯಾಪಾರಿಯ ರೀತಿ ಕಾಣುತ್ತದೆ. ನಾಯಕರು ವೈಯಕ್ತಿಕ ವಿಚಾರಗಳಿಗೆ  ಹಾದಿರಂಪ ಬೀದಿ ರಂಪ ಮಾಡಿಕೊಂಡಿದ್ದಾರೆ. ವಿಶ್ವನಾಥ್ ಅವರು ಚುನಾವಣೆಯಲ್ಲಿ 28 ಕೋಟಿ ಸಾಲ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು  ಸಾರಾ ಮಹೇಶ್ ಅವರ ಅವಿವೇಕತನ ತೋರಿಸುತ್ತದೆ‌ ಎಂದು ಕಿಡಿಕಾರಿದರು.

ಅವರು ವಿಶ್ವನಾಥ್ ಅವರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು. ವಿಶ್ವನಾಥ್ ಅವರು ಯಾವುದೇ ರಿಯಲ್ ಎಸ್ಟೇಟ್, ಅಪಾರ್ಟ್ಮೆಂಟ್, ಡೆವಲಪರ್ ಕೆಲಸ ಮಾಡಿದವರಲ್ಲ. ಸಾರಾ ಮಹೇಶ್ ಗೆ ಹಣಬಲ,ತೋಳಬಲ, ಅಧಿಕಾರ ಬಲವಿದೆ ಎಂದು ಈ ರೀತಿ ಮಾತನಾಡಿದ್ದಾರೆ. ಅವರು ಮಾತಿನಲ್ಲಿ ಹಿಡಿತವಿಲ್ಲದೆ ತುಘಲಕ್ ತರ ಮೈಸೂರಿನಲ್ಲಿ ಓಡಾಡಿಕೊಂಡು ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಮೊದಲು ಸಾರಾ ಮಹೇಶ್ ವಿಶ್ವನಾಥ್ ಅವರ ಬಳಿ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಮುಖಂಡ ರೇವಣ್ಣ  ಆಗ್ರಹಿಸಿದರು.

Key words: assembly-H Vishwanath-loan -sara Mahesh JDS-Revanna-mysore