ಈ ಬಾರಿ ಅತಂತ್ರ ಫಲಿತಾಂಶ: ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿಂದ ಪ್ರಮುಖ ಪಾತ್ರ: ಹೀಗೆ ಭವಿಷ್ಯ ನುಡಿದಿದ್ದು ಯಾರು ಗೊತ್ತೆ..?

Promotion

ಶಿವಮೊಗ್ಗ,ಮೇ,11,2023(www.justkannada.in):  ರಾಜ್ಯದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಲಿದ್ದು ಸರ್ಕಾರ ರಚನೆಯಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಶಿವಮೊಗ್ಗ ನಗರ  ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಭವಿಷ್ಯ ನುಡಿದಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್,  ಶಿವಮೊಗ್ಗ ನಗರದಲ್ಲಿ ಜೆಡಿಎಸ್ ಗೆದ್ದು ಇತಿಹಾಸ ಸೃಷ್ಟಿ ಮಾಡಲಿದೆ. ಶಾಂತಿ ಸೌಹಾರ್ದತೆ, ಅಭಿವೃದ್ಧಿ ಮೇಲೆ ಚುನಾವಣೆ ಮಾಡಿದ್ದೇವೆ. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಹಾಯ ಮಾಡಿದ್ದಾರೆ. ಹೊಸ ಇತಿಹಾಸದ ಪುಟ ತೆರೆಯುವ ವಿಶ್ವಾಸ ಇದೆ ಎಂದು  ಹೇಳಿದರು.

ಬಿಎಸ್​ ವೈರನ್ನು ಜಾತಿಗೆ ಸೀಮಿತ ಮಾಡಿ ಅಪಚಾರ ಮಾಡಿದ್ದಾರೆ. ಕೆ.ಎಸ್​.ಈಶ್ವರಪ್ಪಗೆ ಯಾವುದೇ ಸಾಮರ್ಥ್ಯ ಇಲ್ಲ. ಕೆ.ಎಸ್​​.ಈಶ್ವರಪ್ಪಗೆ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ಇಲ್ಲ ಎಂದು ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದರು.

Key words: assembly election-result-jds-congress-bjp