Saturday, August 15, 2026

BDA Apartments

Home Front Page ನನ್ನ ಜಾಯಮಾನದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ-ಸಿದ್ಧರಾಮಯ್ಯಗೆ ಜಿ.ಟಿ ದೇವೇಗೌಡ ತಿರುಗೇಟು.

ನನ್ನ ಜಾಯಮಾನದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ-ಸಿದ್ಧರಾಮಯ್ಯಗೆ ಜಿ.ಟಿ ದೇವೇಗೌಡ ತಿರುಗೇಟು.

ಮೈಸೂರು,ಮೇ,11,2023(www.justkannada.in): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ಆರೋಪ  ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್ ಅಭ್ಯರ್ಥಿ  ಜಿ.ಟಿ ದೇವೇಗೌಡ ತಿರುಗೇಟು ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಜಿ.ಟಿ ದೇವೇಗೌಡ,  ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣ ಗೊತ್ತಿಲ್ಲ. ನನ್ನ ವಿರುದ್ದ ಯಾರನ್ನ ಕಣಕ್ಕಿಳಿಸಬೇಕು ಅನ್ನೋದು ಗೊತ್ತಿಲ್ಲ ನನ್ನ ಜಾಯಮಾನದಲ್ಲಿ ನಾನು ಯಾರ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ.  ಸಿದ್ದೇಗೌಡನನ್ನ ನಾನು ಯಾಕೆ ಬುಕ್ ಮಾಡಲಿ ಎಂದು ಕಿಡಿಕಾರಿದರು.

ಮಾವಿನಹಳ್ಳಿ ಸಿದ್ದೇಗೌಡನನ್ನ ಜೀವಮಾನದಲ್ಲಿ ಮಾತನಾಡಿಸಲ್ಲ ಸಿದ್ಧರಾಮಯ್ಯ ಬರೀ ದ್ವೇಷದ ರಾಜಕಾರಣ ಮಾಡಿದರು ಅವರಿಗಾಗಿ ದುಡಿದ ಮರೀಗೌಡಗೆ ಟಿಕೆಟ್ ಕೊಡಬೇಕಿತ್ತು.  ಸಿದ್ಧರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಸಿದ್ದೇಗೌಡನ ಬಗ್ಗೆ ಈ ಹಿಂದೆಯೇ ಸಿದ್ಧರಾಮಯ್ಯಗೆ ಹೇಳಿದ್ದೆ ನಾನು ಹೇಳಿದ್ದನ್ನೆಲ್ಲಾ ಸಿದ್ಧರಾಮಯ್ಯ ಮರೆತು ಹೋಗಿದ್ದಾರೆ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರ ಆಶೀರ್ವಾದಿಂದ ಗೆಲ್ಲುತ್ತೇನೆ ಎಂದರು.

ಕಳೆದ ನಾಲ್ಕು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರು ಮತದಾರರ ಕೈಗೆ ಸಿಗದೆ ನಾಪತ್ತೆಯಾಗುವ ಮೂಲಕ ಜಿ.ಟಿ ದೇವೇಗೌಡರ ಗೆಲುವಿಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ವಿಚಾರಕ್ಕೆ ಮಾವಿನಹಳ್ಳಿ ಸಿದ್ಧೇಗೌಡರ ವಿರುದ್ಧ ಸಿದ್ಧರಾಮಯ್ಯ ಗರಂ ಆಗಿದ್ದರು.

Key words: chamundeshwari-constituency-GT Devegowda-Siddaramaiah