Saturday, August 15, 2026

BDA Apartments

Home Front Page ಉಪ್ಪು ಮುಟ್ಟಿ ಪ್ರಮಾಣ ಮಾಡುವ ಮೂಲಕ ಹೊಂದಾಣಿಕೆ ಆರೋಪ ತಳ್ಳಿ ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ...

ಉಪ್ಪು ಮುಟ್ಟಿ ಪ್ರಮಾಣ ಮಾಡುವ ಮೂಲಕ ಹೊಂದಾಣಿಕೆ ಆರೋಪ ತಳ್ಳಿ ಹಾಕಿದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ಧೇಗೌಡ.

ಮೈಸೂರು,ಮೇ,11,2023(www.justkannada.in): ತಮ್ಮ ವಿರುದ್ಧ ಹೊಂದಾಣಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಉಪ್ಪು ಮುಟ್ಟಿ ಪ್ರಮಾಣ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಉಪ್ಪು ಮುಟ್ಟಿ ಪ್ರಮಾಣ ಮಾಡುವ ಮೂಲಕ ತಮ್ಮ ವಿರುದ್ಧದ ಹೊಂದಾಣಿಕೆ ಆರೋಪ ತಳ್ಳಿ ಹಾಕಿದ ಮಾವಿನಹಳ್ಳಿ ಸಿದ್ದೇಗೌಡ,  ಉಪ್ಪು ಮುಟ್ಟಿ ಹೇಳುತ್ತೇನೆ. ಸಿದ್ದರಾಮಯ್ಯರಿಗೆ ಮೋಸ ಮಾಡಿಲ್ಲ. ಚಾಮುಂಡಿ ತಾಯಿ ಆಣೆಗೂ ನಾನು ತಪ್ಪು ಮಾಡಿಲ್ಲ. ನಾನು ಫೋನ್ ಸ್ವಿಚ್ ಆಫ್ ಮಾಡಿಲ್ಲ ಎಂದಿದ್ದಾರೆ.

500 ಜನರ ಗುಂಪು ಕಟ್ಟಿಕೊಂಡು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ನಾನು ಯಾರೋ ಒಬ್ಬ ವ್ಯಕ್ತಿಯನ್ನ ನಂಬಿ ಮೋಸ ಹೋದೆ. ಸಿದ್ದರಾಮಯ್ಯಗೆ ಈ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಖುದ್ದು ಸಿದ್ದರಾಮಯ್ಯರನ್ನ ನಾನೇ ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಮಾವಿನಹಳ್ಳಿ ಸಿದ್ಧೇಗೌಡ ತಿಳಿಸಿದರು.

Key words: chamundeshwari-constituency-congress candidate-Mavinahalli siddegowda