ವಿಧಾನಸಭಾ ಚುನಾವಣಾ ಫಲಿತಾಂಶ: ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ: ಹಿಮಾಚಲ ಪ್ರದೇಶದಲ್ಲಿ ಎರಡು ಪಕ್ಷಗಳ ನಡುವೆ ಬಿಗ್ ಫೈಟ್.

Promotion

ಅಹಮದಬಾದ್,ಡಿಸೆಂಬರ್,8,2022(www.justkannada.in):  ದೇಶದ ಗಮನ ಸೆಳೆದಿರುವ ಗುಜರಾತ್​ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ.

ಈ ಮಧ್ಯೆ ಗುಜರಾತ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೇ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಗುಜರಾತ್ ನಲ್ಲಿ  143 ಕ್ಷೇತ್ರಗಳಲ್ಲಿ ಬಿಜೆಪಿ, 27 ಕ್ಷೇತ್ರಗಳಲ್ಲಿ ಕಾಂಗ್ರೆಸ್  8 ಕ್ಷೇತ್ರಗಳಲ್ಲಿ  ಆಪ್ ಮುನ್ನಡೆ ಸಾಧಿಸಿವೆ.

ಹಿಮಾಚಲ ಪ್ರದೇಶದಲ್ಲಿ68 ಕ್ಷೇತ್ರಗಳ ಪೈಕಿ  33 ಕ್ಷೇತ್ರಗಳಲ್ಲಿ ಬಿಜೆಪಿ 31 ಕಾಂಗ್ರೆಸ್ 3 ಕ್ಷೇತ್ರಗಳಲ್ಲಿ ಇತರೆ ಮುನ್ನಡೆ ಸಾಧಿಸಿದ್ದಾರೆ.

Key words: Assembly –election- result-Gujarat-Himachal Pradesh.