Monday, September 14, 2026

BDA Apartments

55 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ...
Home Front Page 55 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಭೂಮಿ ಪೂಜೆ.

55 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಭೂಮಿ ಪೂಜೆ.

ಮೈಸೂರು,ಡಿಸೆಂಬರ್,7,2022(www.justkannada.in): ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರದ ಚಟ್ನಳ್ಳಿ ಪಾಳ್ಯ ಗ್ರಾಮದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಬಸವಭವನ  ಹಾಗೂ ರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತಿಂದ್ರ ಸಿದ್ದರಾಮಯ್ಯನವರು ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ನಮ್ಮ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ಹದಿಮೂರು ಕೋಟಿಗೂ ಹೆಚ್ಚು ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಮೊದಲಿಗೆ ನಮ್ಮ ಕ್ಷೇತ್ರಕ್ಕೆ ಸೇರುವ ಹಳ್ಳಿಕೆರೆಹುಂಡಿ ಚಟ್ನಳ್ಳಿ ಪಾಳ್ಯ ವಾಜಮಂಗಲ ಎಂ.ಸಿ ಹುಂಡಿ ಗ್ರಾಮಗಳ ರಸ್ತೆಯ ಅಭಿವೃದ್ಧಿ ಸೇರಿದಂತೆ ಸಮುದಾಯ ಭವನಗಳಿಗೆ ಸುಮಾರು ಎರಡುವರೆ ಕೋಟಿ ರೂಗಳ ವೆಚ್ಚದಲ್ಲಿ ಭೂಮಿ ಪೂಜೆ ನೆರವೇಸಲಾಗಿದೆ.  ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳುತ್ತೇವೆ ಎಂದು ತಿಳಿಸಿದರು.55 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ...

ಈ ಸಂದರ್ಭದಲ್ಲಿ ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ, ಉಪಾಧ್ಯಕ್ಷ ರವಿ, ಮಲೆಯ ಮಾದೇಶ್ವರ ಬೆಟ್ಟದ ಮಾಜಿ ಧರ್ಮದರ್ಶಿ ಕೀಳನಪುರ ಮಹಾದೇವಪ್ಪ, ಮೆಲ್ಲಹಳ್ಳಿ ಗಂಗತಿಮ್ಮಯ್ಯ ,ಚಿಕ್ಕದೇವಯ್ಯ, ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗದ ಪಾಳ್ಯ ಸ್ವಾಮಿ ಎಂ.ಸಿ ಹುಂಡಿ ಶಿವಪ್ರಸಾದ್, ಮೆಲ್ಲಹಳ್ಳಿ ರವಿ ಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುದ್ದರಾಮೇಗೌಡ, ರವಿಕುಮಾರ್ ವರಕೊಡು ಉಮೇಶ್, ಬಡಗಳ ಹುಂಡಿ ಬಸವರಾಜು, ಮಹಾದೇವ ,ಲಲಿತಾದ್ರಿಪುರ ಬಸವರಾಜು ಕುಪ್ಪೆ ಹುಚ್ಚಪ್ಪ, ಲ್ಯಾಂಡ್ ಆರ್ಮಿ ಅಧಿಕಾರಿ ಗಿರೀಶ್ ಹಾಗೂ ಪಕ್ಷದ ಮುಖಂಡರುಗಳು ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಹಾಜರಿದ್ದರು.

Key words: 55 lakhs Rs-development works- MLA- Yatindra Siddaramaiah -Bhumi Puja -varuna