ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪಗೆ ಅಸ್ಸಾಂ ಸಿಎಂ ಡಾ.ಹಿಮಂತ ಬಿಸ್ವಾ ಸರ್ಮಾ ಅಭಿನಂದನಾ ಪತ್ರ

Promotion

ಬೆಂಗಳೂರು, ಫೆಬ್ರವರಿ 12, 2023 (www.justkannada.in): ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಸರ್ಮಾ ಅವರು ಅಭಿನಂದಿಸಿದ್ದಾರೆ.

ಎಸ್.ಎಲ್.ಭೈರಪ್ಪ ಅವರಿಗೆ ಪತ್ರ ಬರೆದಿರುವ ಡಾ.ಹಿಮಂತ ಬಿಸ್ವಾ ಸರ್ಮಾ ಅವರು ಹಿರಿಯ ಸಾಹಿತಿ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಭೈರಪ್ಪ ಅವರ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ. ಇದನ್ನು ಪರಿಗಣಿಸಿ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿರುವುದು ಅಭಿನಂದನಾರ್ಹ ಎಂದು ಶ್ಲಾಘಿಸಿದ್ದಾರೆ.

ಭೈರಪ್ಪ ಅವರ ಕಾದಂಬರಿಗಳು ಸಂಖ್ಯಾತ ಸಾಹಿತ್ಯಸಕ್ತರನ್ನು ತಲುಪಿವೆ. ಸಾವಿರಾರು ಮಂದಿಗೆ ಸ್ಫೂರ್ತಿ ನೀಡಿವೆ. ಅವರ ಆಲೋಚನೆ ಹಾಗೂ ಚಿಂತನೆಗಳು ಸಾಹಿತ್ಯ ಕ್ಷೇತ್ರಕ್ಕೆ ಖಜಾನೆಯಂತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಸ್ತಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.